ಪಾಕಿಸ್ತಾನದಲ್ಲಿ ಚುನಾವಣೆಗೂ ಹಣ ಇಲ್ಲ ಎಂದ ರಕ್ಷಣಾ ಸಚಿವ!

Update: 2023-03-25 12:33 GMT

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಹಣಕಾಸು ಸಚಿವಾಲಯದ ಬಳಿ ಸಂಪನ್ಮೂಲ ಇಲ್ಲ ಎಂದು ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾಗಿ ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಮಾಹಿತಿ ಸಚಿವ ಮರ್ರಿಯಮ್ ಔರಂಗಜೇಬ್ ಜತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುವ ವೇಳೆ ಸಚಿವರು ಈ ಅಂಶ ಬಹಿರಂಗಪಡಿಸಿದರು.

ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಕಟುವಾಗಿ ಟೀಕಿಸಿದ ಖ್ವಾಜಾ, ಅವರ ಹತ್ಯೆ ಪ್ರಯತ್ನದ ಆರೋಪ ಸುಳ್ಳು. ಅವರು ಮೊದಲು ಮಾಜಿ ಸೇನಾ ಮುಖ್ಯಸ್ಥ ನಿವೃತ್ತ ಒಮರ್ ಜಾವೇದಿ ಬಾಜ್ವಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಿದ್ದರು. ಇದೀಗ ಅವರ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ. ಅವರ ಪದಚ್ಯುತಿಗೆ ಅಮೆರಿಕವನ್ನು ದೂಷಿಸಿದ್ದರು ಎಂದು ಖ್ವಾಜಾ ಹೇಳಿದ್ದಾಗಿ ಎಆರ್‌ವೈ ನ್ಯೂಸ್ ವರದಿ ವಿವರಿಸಿದೆ.

ಸಂವಿಧಾನ ಬಾಹಿರವಾಗಿ ಪ್ರಾಂತೀಯ ವಿಧಾನಸಭೆಗಳನ್ನು ಇಮ್ರಾನ್ ಖಾನ್ ವಿಸರ್ಜಿಸಿದರು. ಅದರೆ ಅವಿಶ್ವಾಸ ನಿರ್ಣಯದ ಮೂಲಕ ಸಂವಿಧಾನಬದ್ಧವಾಗಿಯೇ ಅವರನ್ನು ಪದಚ್ಯುತಗೊಳಿಸಲಾಗಿದೆ. ಇದೀಗ ಅವರು ಕೋರ್ಟ್ ಮುಂದೆ ಹಾಜರಾಗಲೂ ಬಯಸುವುದಿಲ್ಲ ಎಂದು ಲೇವಡಿ ಮಾಡಿದರು.

Similar News