ಭಾರತಕ್ಕೆ ತೈಲ ಪೂರೈಕೆ ಹೆಚ್ಚಿಸಲು ಒಪ್ಪಂದ: ರಶ್ಯ

Update: 2023-03-29 17:37 GMT

ಮಾಸ್ಕೊ, ಮಾ.29: ಭಾರತಕ್ಕೆ ರಶ್ಯದ ತೈಲ ಪೂರೈಕೆಯನ್ನು ಹೆಚ್ಚಿಸುವ ಕುರಿತ ಒಪ್ಪಂದಕ್ಕೆ ಉಭಯ ದೇಶಗಳ ತೈಲ ಮಾರಾಟ ಸಂಸ್ಥೆಗಳು ಸಹಿ ಹಾಕಿವೆ ಎಂದು ವರದಿಯಾಗಿದೆ. 

ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ರಶ್ಯದ ವಿರುದ್ಧ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಜಾರಿಗೊಳಿಸಿದ ಬಳಿಕ ಯುರೋಪಿಯನ್ ಮಾರುಕಟ್ಟೆಗೆ ರಶ್ಯದ ತೈಲ ಪೂರೈಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತನ್ನ ತೈಲೋತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಲು ಮುಂದಾಗಿದ್ದ ರಶ್ಯ, ರಿಯಾಯ್ತಿ ದರದಲ್ಲಿ ತೈಲ ಮಾರಾಟದಂತಹ ಕೆಲವು ಯೋಜನೆಗಳನ್ನು ಘೋಷಿಸಿತ್ತು.

ಇದೀಗ ರಶ್ಯದ ತೈಲ ಮಾರಾಟ ಸಂಸ್ಥೆ ರೋಸ್ನೆಫ್ಟ್ ಹಾಗೂ ಇಂಡಿಯನ್ ಆಯಿಲ್ ಸಂಸ್ಥೆಗಳ ಮಧ್ಯೆ ಸಹಿ ಹಾಕಲಾದ ಒಪ್ಪಂದದಂತೆ ಭಾರತಕ್ಕೆ ತೈಲ ಸರಬರಾಜನ್ನು ಗಣನೀಯವಾಗಿ ಹೆಚ್ಚಿಸಲು ಹಾಗೂ ವಿವಿಧ ಶ್ರೇಣಿಯ ಉತ್ಪನ್ನಗಳನ್ನು ಪೂರೈಸಲು ನಿರ್ಧರಿಸಲಾಗಿದೆ. ಅಲ್ಲದೆ ಪಾವತಿಯನ್ನು ರಾಷ್ಟ್ರೀಯ ಕರೆನ್ಸಿಯ ಮೂಲಕ ಮಾಡುವ ಬಗ್ಗೆ ಉಭಯ ಸಂಸ್ಥೆಗಳು ಚರ್ಚಿಸಿವೆ  ಎಂದು ರೋಸ್ನೆಫ್ಟ್‍ನ ಸಿಇಒ ಇಗೋರ್ ಸೆಚಿನ್ ಹೇಳಿದ್ದಾರೆ.

Similar News