ಪರಮಾಣು ಶಸ್ತ್ರಾಸ್ತ್ರಗಳ ಪ್ರಮಾಣ ಹೆಚ್ಚಳ: ವರದಿ

Update: 2023-03-29 17:37 GMT

ಓಸ್ಲೋ, ಮಾ.29: ರಶ್ಯ ಮತ್ತು ಚೀನಾದ ಕಾರಣದಿಂದಾಗಿ 2022ರಲ್ಲಿ ಜಾಗತಿಕ ಕಾರ್ಯಾಚರಣಾ ಪರಮಾಣು ಸಿಡಿತಲೆಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಬುಧವಾರ ಪ್ರಕಟವಾದ ಹೊಸ ವರದಿ ಹೇಳಿದೆ.

9 ಅಧಿಕೃತ ಮತ್ತು ಅನಧಿಕೃತ ಪರಮಾಣು ಶಕ್ತ ದೇಶಗಳು 2022ರ ಅಂತ್ಯದಲ್ಲಿ ಬಳಕೆಗೆ ಸಿದ್ಧವಾದ 9,576 ಸಿಡಿತಲೆಗಳನ್ನು ಹೊಂದಿದ್ದವು. ಒಂದು ವರ್ಷದ ಹಿಂದಿನ ಅವಧಿಯಲ್ಲಿ ಪರಮಾಣು ಸಿಡಿತಲೆಗಳ ಪ್ರಮಾಣ 9,440ರಷ್ಟಿತ್ತು . ಈ ಎಲ್ಲಾ ಪರಮಾಣು ಅಸ್ತ್ರಗಳು 1,35,000ಕ್ಕೂ ಹೆಚ್ಚು ಹಿರೋಶಿಮಾ ಬಾಂಬ್‍ಗಳಿಗೆ ಸಮಾನವಾದ ವಿನಾಶಕಾರಿ ಶಕ್ತಿಯನ್ನು ಹೊಂದಿದೆ   ಎಂದು `ನಾರ್ವೆಜಿಯನ್ ಪೀಪಲ್ಸ್ ಏಯ್ಡ್' ಎಂಬ ಎನ್‍ಜಿಒ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಜಾಗತಿಕವಾಗಿ ಹೆಚ್ಚುವರಿ 136 ಪರಮಾಣು ಸಿಡಿತಲೆಗಳು ರಶ್ಯ, ಚೀನಾ, ಭಾರತ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನಗಳ ಉತ್ಪಾದನೆಯಾಗಿದೆ. ಈ ಪ್ರವೃತ್ತಿ 2017ರಿಂದ ಆರಂಭವಾಗಿದ್ದು ನಿರಂತರ ಕಳವಳಕ್ಕೆ ಕಾರಣವಾಗಿದೆ. ಹೊಸ ಸಿಡಿತಲೆಗಳನ್ನು ಸೇರಿಸುವ ಪ್ರವೃತ್ತಿ ನಿಲ್ಲದ ಹೊರತು, ಶೀತಲ ಸಮರದ ಬಳಿಕ ಮೊದಲ ಬಾರಿಗೆ ವಿಶ್ವದ ಒಟ್ಟು ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಶೀಘ್ರದಲ್ಲೇ ಮತ್ತೆ ಹೆಚ್ಚಾಗಲಿದೆ ಎಂದು ವರದಿ ಎಚ್ಚರಿಸಿದೆ.

Similar News