×
Ad

ಇಮ್ರಾನ್‍ರನ್ನು ಅಸಭ್ಯವಾಗಿ ನಿಂದಿಸಿದ ಸಚಿವ ವೀಡಿಯೊ ವೈರಲ್

Update: 2023-03-29 23:09 IST

ಇಸ್ಲಮಾಬಾದ್, ಮಾ.29: ಪಾಕಿಸ್ತಾನದ ಸಂಸತ್ತಿನಲ್ಲಿ ಆಡಳಿತ ಪಕ್ಷದ ಹಿರಿಯ ಸದಸ್ಯ, ಶಿಕ್ಷಣ ಸಚಿವ ರಾಣಾ ತನ್ವೀರ್ ಹುಸೈನ್ ಬಹಿರಂಗವಾಗಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ವಿರುದ್ಧ ಅಸಭ್ಯ ಪದ ಬಳಸಿ ನಿಂದಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇಮ್ರಾನ್ ತಂದೆಯ ಹೆಸರನ್ನು ಉಲ್ಲೇಖಿಸುವಾಗ ಸಚಿವರು ಅಸಭ್ಯ ಪದ ಬಳಸಿದಾಗ ಆಡಳಿತ ಪಕ್ಷದ ಇತರ ಸದಸ್ಯರು ಜೋರಾಗಿ ನಗುವುದೂ ವೀಡಿಯೊದಲ್ಲಿ ದಾಖಲಾಗಿದೆ. ಬಳಿಕ ಮಧ್ಯಪ್ರವೇಶಿಸಿದ ಸ್ಪೀಕರ್ , ಸಚಿವರು ಆಡಿದ ಪದಗಳನ್ನು ಸಂಸತ್ತಿನ ಕಡತದಿಂದ ತೆಗೆದು ಹಾಕುವಂತೆ ಸೂಚಿಸಿದರು.

Similar News