ಐಪಿಎಲ್-2023ಕ್ಕೆ ವರ್ಣರಂಜಿತ ಚಾಲನೆ

ಪ್ರೇಕ್ಷಕರನ್ನು ರಂಜಿಸಿದ ರಶ್ಮಿಕಾ, ತಮನ್ನಾ, ಅರ್ಜಿತ್ ಸಿಂಗ್

Update: 2023-03-31 14:41 GMT

ಅಹಮದಾಬಾದ್, ಮಾ.31: ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಶುಕ್ರವಾರ ವರ್ಣರಂಜಿತ ಚಾಲನೆ ನೀಡಲಾಯಿತು.

ನಟಿಯರಾದ ರಶ್ಮಿಕಾ ಮಂಧಣ್ಣ, ತಮನ್ನಾ ಭಾಟಿಯಾ ಹಾಗೂ ಗಾಯಕ ಅರ್ಜಿತ್ ಸಿಂಗ್ ಹಾಡು-ನೃತ್ಯದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಆಸ್ಕರ್ ವಿಜೇತ 'ನಾಟು ನಾಟು' ಹಾಡಿಗೆ ರಶ್ಮಿಕಾ ಹೆಜ್ಜೆ ಹಾಕಿದರು.

8 ವಾರಗಳ 12 ತಾಣಗಳಲ್ಲಿ 74 ಪಂದ್ಯಗಳು ನಡೆಯಲಿವೆ.

ಅಹಮದಾಬಾದ್ ನಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮುಖಾಮುಖಿಯೊಂದಿಗೆ ಐಪಿಎಲ್ ಆರಂಭವಾಗಿದೆ.

Similar News