ಭಾರತ-ಚೀನಾ ಗಡಿಯಲ್ಲಿ ಚೀನಾದಿಂದ ಪ್ರಚೋದನಕಾರಿ ಕ್ರಮ: ಅಮೆರಿಕ ಖಂಡನೆ

Update: 2023-03-31 17:30 GMT

ವಾಷಿಂಗ್ಟನ್, ಮಾ.31: ಭಾರತ-ಚೀನಾ ಗಡಿಭಾಗದಲ್ಲಿ ಚೀನಾ ನಿರಂತರ ಪ್ರಚೋದನಕಾರಿ ಕೃತ್ಯ ನಡೆಸುತ್ತಿದೆ ಎಂದು ಅಮೆರಿಕದ ಶ್ವೇತಭವನ ಖಂಡಿಸಿದೆ.

ಭಾರತದೊಂದಿಗೆ ಹೆಚ್ಚು ನಿಕಟವಾಗಿ ಕಾರ್ಯನಿರ್ವಹಿಸಲು ಅಮೆರಿಕ ಉದ್ದೇಶಿಸಿದೆ. ಭಾರತವು ಅಮೆರಿಕದ ಅತ್ಯಂತ ನಿಕಟಮಿತ್ರರಾಷ್ಟ್ರವಲ್ಲ, ಆದರೆ ನಾವು ನಿಕಟ ಪಾಲುದಾರರಾಗಿದ್ದೇವೆ ಮತ್ತು ಹಲವು ವಿಷಯಗಳನ್ನು ಹಂಚಿಕೊಂಡಿದ್ದೇವೆ. ಜಾಗತಿಕ ವೇದಿಕೆಯಲ್ಲಿ ಭಾರತವು ಶ್ರೇಷ್ಟ ರಾಷ್ಟ್ರವಾಗಿ ವಹಿಸುವ ಪಾತ್ರವನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷರ  ಉಪ ಸಹಾಯಕ ಮತ್ತು ಇಂಡೊ-ಪೆಸಿಫಿಕ್ನ ಸಂಯೋಜಕ ಕರ್ಟ್ ಕ್ಯಾಂಪ್ಬೆಲ್ ಹೇಳಿದ್ದಾರೆ.

ಇದಕ್ಕೆ ನಾವು ಪ್ರೋತ್ಸಾಹ ನೀಡಬೇಕು ಮತ್ತು ಈ ಸಂಬಂಧವನ್ನು ಇನ್ನಷ್ಟು ಆಳವಾಗಿಸಲು ಕ್ರಮ ಕೈಗೊಳ್ಳಬೇಕು. ಭಾರತ-ಅಮೆರಿಕ ಸಂಬಂಧವು 21ನೇ ಶತಮಾನದಲ್ಲಿ ಅಮೆರಿಕಕ್ಕೆ ಅತ್ಯಂತ ಮಹತ್ವದ ದ್ವಿಪಕ್ಷೀಯ ಸಹಕಾರ ಸಂಬಂಧವಾಗಿದೆ ಎಂದವರು ಹೇಳಿದ್ದಾರೆ.

Similar News