ಟ್ರಾನ್ಸ್-ಪೆಸಿಫಿಕ್ ವ್ಯಾಪಾರ ಸಂಘಟನೆಗೆ ಬ್ರಿಟನ್ ಸೇರ್ಪಡೆ

Update: 2023-03-31 17:41 GMT

ಲಂಡನ್, ಮಾ.31: ಬ್ರೆಕ್ಸಿಟ್ ಬಳಿಕದ ಅತೀ ದೊಡ್ಡ ಒಪ್ಪಂದಕ್ಕೆ ಬ್ರಿಟನ್ ಅಂಗೀಕಾರ ನೀಡಿದ್ದು 11 ದೇಶಗಳ ಟ್ರಾನ್ಸ್-ಪೆಸಿಫಿಕ್ ವ್ಯಾಪಾರ ಸಂಘಟನೆಗೆ  ಸೇರ್ಪಡೆಗೊಳ್ಳುವುದಾಗಿ ಘೋಷಿಸಿದೆ.

ಕಾಂಪ್ರಹೆನ್ಸಿವ್ ಆ್ಯಂಡ್ ಪ್ರೋಗ್ರೆಸಿವ್ ಅಗ್ರಿಮೆಂಟ್ ಫಾರ್ ಟ್ರಾನ್ಸ್ ಪೆಸಿಫಿಕ್ ಪಾಟ್ರ್ ರ್ಶಿಪ್(ಸಿಪಿಟಿಪಿಪಿ)ಗೆ ಸೇರ್ಪಡೆಗೊಳ್ಳಲು ಬ್ರಿಟನ್ ಒಪ್ಪಿದೆ. ಸಿಪಿಟಿಪಿಪಿ ವ್ಯಾಪಾರ ಸಂಘಟನೆಯ ಸದಸ್ಯತ್ವವು ಬ್ರಿಟನ್ ಅನ್ನು  ಪೆಸಿಫಿಕ್ ಆರ್ಥಿಕತೆಯ ಕ್ರಿಯಾತ್ಮಕ ಮತ್ತು ಬೆಳೆಯುತ್ತಿರುವ ಗುಂಪಿನ ಕೇಂದ್ರದಲ್ಲಿ ಇರಿಸಲಿದೆ. ಈ ಸದಸ್ಯತ್ವವು ಬ್ರೆಕ್ಸಿಟ್ ನಂತರದ ನಮ್ಮ ಸ್ವಾತಂತ್ರ್ಯದ ನೈಜ ಆರ್ಥಿಕ ಪ್ರಯೋಜನವನ್ನು ಪ್ರದರ್ಶಿಸುತ್ತದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಹೇಳಿದ್ದಾರೆ.

ಆಸ್ಟ್ರೇಲಿಯಾ, ಜಪಾನ್,  ಬ್ರೂನೈ, ಕೆನಡಾ, ಚಿಲಿ, ಮಲೇಶ್ಯಾ, ಮೆಕ್ಸಿಕೊ, ನ್ಯೂಝಿಲ್ಯಾಂಡ್, ಪೆರು, ಸಿಂಗಾಪುರ ಮತ್ತು ವಿಯೆಟ್ನಾಮ್ ಇವು ಸಿಪಿಟಿಪಿಪಿ ಸದಸ್ಯ ದೇಶಗಳಾಗಿವೆ. ಹೆಚ್ಚಿನ ಸಿಪಿಟಿಪಿಪಿ ದೇಶಗಳೊಂದಿಗೆ ಬ್ರಿಟನ್ ಹೊಂದಿರುವ ದ್ವಿಪಕ್ಷೀಯ ಸಂಬಂಧಕ್ಕೆ ಈ ಸದಸ್ಯತ್ವ ಪೂರಕವಾಗಿರಲಿದೆ.  2020ರಲ್ಲಿ ಯುರೋಪಿಯನ್ ಯೂನಿಯನ್ ನಿಂದ ನಿರ್ಗಮಿಸಿದ ಬಳಿಕ ಬ್ರಿಟನ್ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಜತೆಗೆ ಜಾಗತಿಕ ವ್ಯಾಪಾರ ಸಂಬಂಧ ನಿರ್ಮಿಸಲು ನಿರ್ಧರಿಸಿದೆ.

Similar News