×
Ad

ಬ್ರಿಟಿಷ್-ಪಾಕಿಸ್ತಾನಿ ಪುರುಷರು ರೇಪ್ ಮಾಡ್ತಾರೆ: ಬ್ರಿಟನ್ ಸಚಿವೆಯ ವಿವಾದಾತ್ಮಕ ಹೇಳಿಕೆ

Update: 2023-04-05 23:26 IST

ಲಂಡನ್, ಎ.5: ಬ್ರಿಟನ್ ಹುಡುಗಿಯರಿಗೆ ಹಾನಿ ಎಸಗುವ, ಅತ್ಯಾಚಾರ ಎಸಗುವ, ಮಾದಕವಸ್ತುಗಳ ವ್ಯವಹಾರದಲ್ಲಿ ನಿರತರಾಗಿರುವ ಅಪರಾಧಿಗಳ ಕೂಟವೊಂದು ಬ್ರಿಟನ್ ನಲ್ಲಿ ಬೆಳೆಯುತ್ತಿದ್ದು ಬ್ರಿಟಿಷ್-ಪಾಕಿಸ್ತಾನೀಯರು ಇದರ ಭಾಗವಾಗಿದ್ದಾರೆ' ಎಂದು ಬ್ರಿಟನ್ ನ ಗೃಹ ಕಾರ್ಯದರ್ಶಿ ಸುಯೆಲಾ ಬ್ರೆವರ್ಮನ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಮಕ್ಕಳು ಹಾಗೂ ಯುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ನಿರತರಾಗಿರುವ ಪುರುಷರ ಗುಂಪಿನಲ್ಲಿ ಬಹುತೇಕ ಎಲ್ಲಾ ಬ್ರಿಟಿಷ್-ಪಾಕಿಸ್ತಾನೀಯರು ಸೇರಿದ್ದಾರೆ ಎಂದು  ಕಳೆದ ವಾರ `ಸ್ಕೈ ನ್ಯೂಸ್'ಗೆ ನೀಡಿದ್ದ ಸಂದರ್ಶನದಲ್ಲಿ ಬ್ರೆವರ್ಮನ್ ಹೇಳಿದ್ದರು.

ಇದು ದಾರಿತಪ್ಪಿಸುವ ಚಿತ್ರಣವಾಗಿದ್ದು ಬ್ರಿಟಿಷ್ ಪಾಕಿಸ್ತಾನಿಗಳನ್ನು ವಿಭಿನ್ನವಾಗಿ ಗುರಿಯಾಗಿಸುವ ಮತ್ತು ಪರಿಗಣಿಸುವ ಉದ್ದೇಶವನ್ನು ಹೊಂದಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರೆ ಮುಮ್ತಾಝ್ ಝಹ್ರಾ ಬಲೋಚ್ ಖಂಡಿಸಿದ್ದಾರೆ.

Similar News