×
Ad

ಜಪಾನ್: 10 ಸಿಬ್ಬಂದಿಗಳಿದ್ದ ಸೇನಾ ಹೆಲಿಕಾಪ್ಟರ್ ನಾಪತ್ತೆ

Update: 2023-04-06 21:21 IST

ಟೋಕಿಯೊ, ಎ.6: 10 ಸಿಬ್ಬಂದಿಗಳಿದ್ದ ಜಪಾನ್ನ ಸೆನಾ ಹೆಲಿಕಾಪ್ಟರ್ ದಕ್ಷಿಣದ ದ್ವೀಪದಲ್ಲಿ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಪಾನ್ನ ಕರಾವಳಿ ಕಾವಲು ಪಡೆ ಗುರುವಾರ ಹೇಳಿದೆ.

‌ಮಿಯಾಕೊ ದ್ವೀಪದ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಯುಎಚ್-60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗುರುವಾರ ಸಂಜೆ ನಾಪತ್ತೆಯಾಗಿದ್ದು ಪತ್ತೆ ಕಾರ್ಯಕ್ಕೆ 4 ಗಸ್ತು ನೌಕೆಗಳನ್ನು ನಿಯೋಜಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ಹೇಳಿದೆ. ದಕ್ಷಿಣದ ಕ್ಯುಶು ದ್ವೀಪದಲ್ಲಿರುವ ಸೇನಾನೆಲೆಗೆ ಸೇರಿದ ಈ ಹೆಲಿಕಾಪ್ಟರ್ ಮಿಯಾಕೊ ದ್ವೀಪದ ಬಳಿ ದೈನಂದಿನ ಗಸ್ತುಕಾರ್ಯದಲ್ಲಿ ನಿರತವಾಗಿತ್ತು ಎಂದು ವರದಿಯಾಗಿದೆ.

Similar News