ಇಸ್ರೇಲ್ ಮೇಲಿನ ಕ್ಷಿಪಣಿ ದಾಳಿಗೆ ಶತ್ರುಗಳು ಬೆಲೆ ತೆರಬೇಕು: ನೆತನ್ಯಾಹು ಎಚ್ಚರಿಕೆ
ಜೆರುಸಲೇಂ, ಎ.7: ಲೆಬನಾನ್ ಕಡೆಯಿಂದ ಇಸ್ರೇಲ್‍ನತ್ತ 34 ರಾಕೆಟ್‍ಗಳನ್ನು ಉಡಾಯಿಸಲಾಗಿದ್ದು ಇದಕ್ಕೆ ಇಸ್ರೇಲ್ ಪ್ರತೀಕಾರ ಕ್ರಮ ಕೈಗೊಳ್ಳಲಿದೆ. ಕ್ಷಿಪಣಿ ದಾಳಿಗೆ ಇಸ್ರೇಲ್ ಶತ್ರುಗಳು ಬೆಲೆ ತೆರಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.
25 ಕ್ಷಿಪಣಿಗಳನ್ನು ತುಂಡರಿಸಲಾಗಿದೆ. ಐದು ರಾಕೆಟ್‍ಗಳು ಇಸ್ರೇಲ್ ಪ್ರದೇಶಕ್ಕೆ ಅಪ್ಪಳಿಸಿದ್ದು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ. ಯಾವುದೇ ಸಂಘಟನೆ ದಾಳಿಯ ಹೊಣೆ ವಹಿಸಿಲ್ಲ. ಆದರೆ ಇಸ್ರೇಲ್ ಸೇನೆಯ ವಕ್ತಾರ ಲೆ|ಕ| ರಿಚರ್ಡ್ ಹೆಚಿಟ್ ಫೆಲೆಸ್ತೀನಿಯನ್ ಸಂಘಟನೆಯನ್ನು ದೂಷಿಸಿದ್ದಾರೆ.
`ಇದು ಫೆಲೆಸ್ತೀನ್ ಸಂಘಟನೆಯ ಕೃತ್ಯ ಎಂಬುದು ಖಚಿತವಾಗಿದೆ. ಹಮಾಸ್ ಆಗಿರಬಹುದು, ಅಥವಾ ಇಸ್ಲಾಮಿಕ್ ಜಿಹಾದ್ ಸಂಘಟನೆ ಆಗಿರಬಹುದು. ಆದರೆ ಇದು ಹಝ್‍ಬುಲ್ಲ ಸಂಘಟನೆಯ ಕೃತ್ಯವಲ್ಲ. ಆದರೆ ಹಝ್‍ಬುಲ್ಲ ಸಂಘಟನೆಗೆ ದಾಳಿಯ ಬಗ್ಗೆ ಮಾಹಿತಿಯಿದೆ, ಲೆಬನಾನ್ ಕೂಡಾ ಸ್ವಲ್ಪ ಮಟ್ಟಿಗೆ ಹೊಣೆಯಾಗಿದೆ. ಇರಾನ್ ಕೂಡಾ ಇದರಲ್ಲಿ ಸೇರಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದವರು ಹೇಳಿದ್ದಾರೆ.
ಆದರೆ ಸಂಘರ್ಷ ಉಲ್ಬಣಕ್ಕೆ ಲೆಬನಾನ್ ಹೊಣೆಯಲ್ಲ ಎಂದು ಇಸ್ರೇಲ್‍ನ ಉಸ್ತುವಾರಿ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ. ಈ ಮಧ್ಯೆ, ಸಂಯಮ ವಹಿಸುವಂತೆ ಲೆಬನಾನ್‍ನಲ್ಲಿ ಗಡಿಭಾಗದಲ್ಲಿ ಗಸ್ತುತಿರುಗಲು ನಿಯೋಜನೆಗೊಂಡಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆ(ಯುಎನ್‍ಎಫ್‍ಐಎಲ್) ಇಸ್ರೇಲ್ ಮತ್ತು ಲೆಬನಾನ್‍ಗೆ ಕರೆ ನೀಡಿದೆ.