ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್: ಗುಜರಾತ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಗೆ ರೋಚಕ ಜಯ
ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಗುಜರಾತ್ ಟೈಟನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ರಿಂಕು ಸಿಂಗ್ ಕೊನೆಯ ಓವರ್ ನಲ್ಲಿ 5 ಸಿಕ್ಸರ್ ಬಾರಿಸುವ ಮೂಲಕ ಕೊಲ್ಕತ್ತಾ ತಂಡಕ್ಕೆ ರೋಚಕ ಜಯ ತಂದು ಕೊಟ್ಟರು.
ಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡರು. ಸಾಯಿ ಸುದರ್ಶನ್ 53 ಮತ್ತು ವಿಜಯ್ ಶಂಕರ್ 63 ರನ್ ನೆರವಿನಿಂದ 204 ರನ್ ಗಳಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಕಠಿಣ ಸವಾಲು ನೀಡಿತ್ತು.
205 ರನ್ ಗುರಿ ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ಅಂತಿಮ ಓವರ್ ನಲ್ಲಿ 29 ರನ್ ಅವಶ್ಯಕತೆ ಇದ್ದಾಗ ರಿಂಕು ಸಿಂಗ್ 5 ಸಿಕ್ಸರ್ ಬಾರಿಸುವ ಮೂಲಕ ರೋಚಕ ಜಯ ತಂದುಕೊಟ್ಟರು.
ವೆಂಕಟೇಶ್ ಅಯ್ಯರ್ 83, ನಾಯಕ ನಿತೀಶ್ ರಾಣಾ 43 ರನ್ ಗಳಿಸಿ ಗೆಲುವಿಗೆ ಸಹಕಾರಿಯಾದರು. ರಿಂಕು ಸಿಂಗ್ 21 ಎಸೆತಗಳಲ್ಲಿ 48 ರನ್ ಗಳಿಸಿದರು.
ಗುಜರಾತ್ ಪರ ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು.