×
Ad

ಐಪಿಎಲ್: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 172 ರನ್‌ಗೆ ಆಲೌಟ್

Update: 2023-04-11 21:26 IST

 ಹೊಸದಿಲ್ಲಿ, ಎ.11: ಆಲ್‌ರೌಂಡರ್ ಅಕ್ಷರ್ ಪಟೇಲ್(54 ರನ್, 25 ಎಸೆತ) ಹಾಗೂ ನಾಯಕ ಡೇವಿಡ್ ವಾರ್ನರ್(51 ರನ್, 47 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾರ ನಡೆದ 16ನೇ ಐಪಿಎಲ್ ಪಂದ್ಯದಲ್ಲಿ 172 ರನ್ ಗಳಿಸಿ ಆಲೌಟಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.4 ಓವರ್‌ಗಳಲ್ಲಿ 172 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಅಗ್ರ ಕ್ರಮಾಂಕದಲ್ಲಿ ವಾರ್ನರ್ ಅರ್ಧಶತಕದ ಕೊಡುಗೆ ನೀಡಿದರೆ, ಕೆಳ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಚೊಚ್ಚಲ ಅರ್ಧಶತಕ(54 ರನ್)ಸಿಡಿಸಿದರು.

ಪಿಯೂಷ್ ಚಾವ್ಲಾ(3-22) ಹಾಗೂ ಜೇಸನ್ ಬೆಹ್ರೆನ್‌ಡಾರ್ಫ್(3-23)ತಲಾ ಮೂರು ವಿಕೆಟ್‌ಗಳನ್ನು, ಮೆರೆಡಿತ್(2-34)ಎರಡು ವಿಕೆಟ್ ಪಡೆದರು.
 

Similar News