ಐಪಿಎಲ್: ಮುಂಬೈಗೆ ಡೆಲ್ಲಿ ವಿರುದ್ಧ ಆರು ವಿಕೆಟ್ ಜಯ
ರೋಹಿತ್ ಶರ್ಮಾ ಅರ್ಧಶತಕ
ಹೊಸದಿಲ್ಲಿ, ಎ.11: ನಾಯಕ ರೋಹಿತ್ ಶರ್ಮಾ(65 ರನ್, 45 ಎಸೆತ), ತಿಲಕ್ ವರ್ಮಾ(41 ರನ್, 29 ಎಸೆತ) ಹಾಗೂ ಇಶಾನ್ ಕಿಶನ್(31 ರನ್, 26 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಂಗಳವಾರ ನಡೆದ 16ನೇ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ.
ಗೆಲ್ಲಲು 173 ರನ್ ಗುರಿ ಪಡೆದಿದ್ದ ಮುಂಬೈ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿದೆ.
ರೋಹಿತ್ ಹಾಗೂ ಇಶಾನ್ ಮೊದಲ ವಿಕೆಟಿಗೆ 71 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಕಿಶನ್ ಔಟಾದ ನಂತರ ರೋಹಿತ್ ಹಾಗೂ ತಿಲಕ್ 2ನೇ ವಿಕೆಟಿಗೆ 68 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 5ನೇ ವಿಕೆಟಿಗೆ 30 ರನ್ ಜೊತೆಯಾಟ ನಡೆಸಿದ ಡೇವಿಡ್ (ಔಟಾಗದೆ 13 ರನ್) ಹಾಗೂ ಕ್ಯಾಮರೂನ್ ಗ್ರೀನ್(ಔಟಾಗದೆ 17 ರನ್)ತಂಡ ಕೊನೆಯ ಓವರ್‌ನಲ್ಲಿ ಗೆಲುವಿನ ರನ್ ಗಳಿಸಲು ನೆರವಾದರು.
ಮುಕೇಶ್ ಕುಮಾರ್(2-30)ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ 19.4 ಓವರ್‌ಗಳಲ್ಲಿ 172 ರನ್‌ಗೆ ಆಲೌಟಾಯಿತು.