ಭಾರತದ ಈ ಎರಡು ನಗರಗಳಲ್ಲಿ ಪಾಕಿಸ್ತಾನ ವಿಶ್ವಕಪ್ ಪಂದ್ಯ ಆಡಲಿದೆ

Update: 2023-04-12 04:01 GMT

ಇಸ್ಲಾಮಾಬಾದ್: ಪ್ರಸಕ್ತ ವರ್ಷದ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಚೆನ್ನೈ ಹಾಗೂ ಕೊಲ್ಕತ್ತಗಳಲ್ಲಿ ತನ್ನ ಪಂದ್ಯಗಳನ್ನು ಆಡಲು ಮುಂದಾಗಿದೆ. ಈ ಹಿಂದಿನ ಪ್ರವಾಸಗಳ ಅವಧಿಯಲ್ಲಿ ಅತ್ಯಂತ ಸುರಕ್ಷಿತ ತಾಣಗಳು ಎಂದು ಕಂಡುಬಂದ ಈ ಎರಡು ನಗರಗಳಲ್ಲಿ ತನ್ನ ಪಂದ್ಯಗಳನ್ನು ಆಡಲು ಆದ್ಯತೆ ನೀಡಿರುವುದಾಗಿ ಐಸಿಸಿ ಮೂಲಗಳು ಹೇಳಿವೆ.

ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 5ರಂದು ಆರಂಭವಾಗಲಿದ್ದು, ಅಹ್ಮದಾಬಾದ್, ಲಕ್ನೋ, ಮುಂಬೈ, ರಾಜಕೋಟ್, ಬೆಂಗಳೂರು, ದೆಹಲಿ, ಇಂಧೋರ್,  ಮೊಹಾಲಿ ಹಾಗೂ ಹೈದರಾಬಾದ್ ಸೇರಿದಂತೆ 12 ನಗರಗಳಲ್ಲಿ 46 ಪಂದ್ಯಗಳು ನಡೆಯುತ್ತವೆ. ಈ ಸಂಬಂಧ ಐಸಿಸಿ ಮಟ್ಟದಲ್ಲಿ ಮಾತುಕತ ನಡೆದಿದೆ ಎನ್ನಲಾಗಿದ್ದು, ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿಪ್ರಮುಖರು ಐಸಿಸಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

"ಪಾಕಿಸ್ತಾನ ತಂಡ ಭಾರತದಲ್ಲಿ ಆಡುವುದು ಬಿಸಿಸಿಐ ಹಾಗೂ ಭಾರತ ಸರ್ಕಾರ ಈ ಕುರಿತು ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿರುತ್ತದೆ. ಆದರೆ ಪಾಕಿಸ್ತಾನ ತನ್ನ ಬಹುತೇಕ ಪಂದ್ಯಗಳನ್ನು ಕೊಲ್ಕತ್ತಾ ಹಾಗೂ ಚೆನ್ನೈನಲ್ಲಿ ಆಡಲು ಬಯಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

"2016ರ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಕೊಲ್ಕತ್ತಾದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೆಣಸಿತ್ತು. ಅಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಎಲ್ಲರಿಗೂ ಸಂತಸವಿದೆ. ಅಂತೆಯೇ ಚೆನ್ನೈ, ಪಾಕ್ ಆಟಗಾರರಿಗೆ ಸದಾ ಸ್ಮರಣೀಐ ತಾಣ. ನಿರ್ದಿಷ್ಟ ತಾಣಗಳುಪಾಕಿಸ್ತಾನಕ್ಕೆ ಸುರಕ್ಷಿತ ಎಂಬ ಭಾವನೆಯಿದೆ ಎಂದು ಮೂಲಗಳು ಹೇಳಿವೆ.

Similar News