×
Ad

ಇಂಡೋನೇಶ್ಯಾದಲ್ಲಿ 7.0 ತೀವ್ರತೆಯ ಭೂಕಂಪ

Update: 2023-04-14 22:54 IST

ಜಕಾರ್ತ, ಎ.14: ಇಂಡೊನೇಶ್ಯಾದ ಉತ್ತರ ಕರಾವಳಿಯಲ್ಲಿರುವ ಜಾವಾ ದ್ವೀಪದಲ್ಲಿ ಶುಕ್ರವಾರ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ವರದಿ ಮಾಡಿದೆ.

‌ಜಾವಾ ಬಳಿಯ ತುಬಾನ್ ಎಂಬಲ್ಲಿ ಶುಕ್ರವಾರ ಸಂಜೆ ಸ್ಥಳೀಯ ಕಾಲಮಾನ 3:25ಕ್ಕೆ ಸಂಭವಿಸಿದ ಈ ಭೂಕಂಪ 96 ಕಿ.ಮೀ ದೂರದ ಸಮುದ್ರದಲ್ಲಿ ಸುಮಾರು 594 ಕಿ.ಮೀ ಆಳದಲ್ಲಿ  ಕೇಂದ್ರೀಕೃತಗೊಂಡಿತ್ತು ಎಂದು ಇಂಡೊನೇಶ್ಯಾದ ಭೂವೈಜ್ಞಾನಿಕ ಇಲಾಖೆ ಹೇಳಿದ್ದು ತ್ಸುನಾಮಿಯ ಎಚ್ಚರಿಕೆ ನೀಡಲಾಗಿಲ್ಲ ಎಂದಿದೆ.

ಭೂಕಂಪದ ಕಾರಣ ಸುರಾಬಯ, ತುಬಾನ್, ಡೆನ್ಪಸಾರ್, ಸೆಮರಾಂಗ್ ಪ್ರದೇಶದಲ್ಲಿಯೂ ಭೂಮಿ ನಡುಗಿದೆ. ಭೂಕಂಪ ಅತ್ಯಂತ ಆಳದಲ್ಲಿ ಕೇಂದ್ರೀಕೃತಗೊಂಡಿದ್ದ ಕಾರಣ ಯಾವುದೇ ನಾಶ-ನಷ್ಟದ ಮಾಹಿತಿ ಬಂದಿಲ್ಲ ಎಂದು ಇಂಡೊನೇಶ್ಯಾದ ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರರನ್ನು ಉಲ್ಲೇಖಿಸಿ `ರಾಯ್ಟರ್' ವರದಿ ಮಾಡಿದೆ.

Similar News