×
Ad

ಐಪಿಎಲ್: ಪಂಜಾಬ್ ಕಿಂಗ್ಸ್ ಗೆಲುವಿಗೆ 160 ರನ್ ಗುರಿ ನೀಡಿದ ಲಕ್ನೊ

Update: 2023-04-15 21:46 IST

 ಲಕ್ನೊ. ಎ.15: ನಾಯಕ ಕೆ.ಎಲ್.ರಾಹುಲ್(74 ರನ್, 56 ಎಸೆತ, 8 ಬೌಂಡರಿ, 1 ಸಿಕ್ಸರ್)ಏಕಾಂಗಿ ಹೋರಾಟದ ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್‌ನ 21ನೇ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಲಸಲ್ಪ್ಪಟ್ಟ ಲಕ್ನೊದ ಪರ ರಾಹುಲ್ ಹಾಗೂ ಕೈಲ್ ಮೇಯರ್ಸ್(29 ರನ್, 23 ಎಸೆತ)ಮೊದಲ ವಿಕೆಟಿಗೆ 53 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಮೇಯರ್ಸ್ ಔಟಾದ ನಂತರ ಕೃನಾಲ್ ಪಾಂಡ್ಯ(18 ರನ್, 17 ಎಸೆತ) ಜೊತೆ ಕೈಜೋಡಿಸಿದ ರಾಹುಲ್ 3ನೇ ವಿಕೆಟಿಗೆ 48 ರನ್ ಜೊತೆಯಾಟ ನಡೆಸಿದ್ದಾರೆ.

5ನೇ ವಿಕೆಟಿಗೆ ಸ್ಟೋನಿಸ್(15 ರನ್, 11 ಎಸೆತ)ಅವರೊಂದಿಗೆ 31 ರನ್ ಸೇರಿಸಿದ ರಾಹುಲ್ ತಂಡದ ಮೊತ್ತವನ್ನು 159ಗೆ ತಲುಪಿಸಿದರು.

ಸ್ಯಾಮ್ ಕರನ್(3-31)ಹಾಗೂ ಕಾಗಿಸೊ ರಬಾಡ(2-34)ಐದು ವಿಕೆಟ್‌ಗಳನ್ನು ಹಂಚಿಕೊಂಡರು.
 

Similar News