×
Ad

ಕಾಂಗೋ: ಬಂಡುಗೋರರಿಂದ 42 ಮಂದಿಯ ಹತ್ಯೆ

Update: 2023-04-15 22:32 IST

ಬ್ರಝಾವಿಲೆ, ಎ.15: ಪೂರ್ವ ಕಾಂಗೋದ ಇಟುರಿ ಪ್ರಾಂತದಲ್ಲಿ ಬಂಡುಗೋರ ಗುಂಪೊಂದು ಕನಿಷ್ಟ 42 ಮಂದಿಯನ್ನು ಹತ್ಯೆ  ಮಾಡಿರುವುದಾಗಿ ನಾಗರಿಕ ಸಂಸ್ಥೆಯನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

`ಕೊಡೆಕೊ' ಸಶಸ್ತ್ರ ಹೋರಾಟಗಾರರ ತಂಡವು ಡಿಜುಗು ಪ್ರದೇಶದ ಮೂರು ನಗರಗಳ ಮೇಲೆ ದಾಳಿ ನಡೆಸಿ ಹಲವು ಮನೆಗಳನ್ನು ಸುಟ್ಟುಹಾಕಿದೆ. ದಾಳಿಯಲ್ಲಿ ಕನಿಷ್ಟ 42 ಮಂದಿ ಹತರಾಗಿದ್ದು ಇತರ 7 ಮಂದಿ ಗಾಯಗೊಂಡಿದ್ದಾರೆ ಎಂದು ನಾಗರಿಕ ಸಂಸ್ಥೆಯ ಅಧ್ಯಕ್ಷ ಡಿಯುಡೋನ್ ಲೋಸ್ಸ ಹೇಳಿದ್ದಾರೆ. ದಾಳಿ ನಡೆದಿರುವುದನ್ನು ಸೇನೆ ದೃಢಪಡಿಸಿದೆ.

`ಲೆಂಡು' ಜನಾಂಗೀಯ ಗುಂಪುಗಳ ಸಶಸ್ತ್ರಹೋರಾಟಗಾರರ ಒಕ್ಕೂಟ ಕೊಡೆಕೊ ಮತ್ತು `ಹೆಮಾ' ಜನಾಂಗೀಯ ಗುಂಪಿನ ಸಂಘಟನೆ `ಝೈರ್'ಗಳ ಮಧ್ಯೆ 2017ರಿಂದಲೂ ಸಂಘರ್ಷ ನಡೆಯುತ್ತಿದೆ. 

Similar News