ಐಪಿಎಲ್: ಲಕ್ನೊ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವಿನ ಕೇಕೆ
ಸಿಕಂದರ್ ರಝಾ ಅರ್ಧಶತಕ
ಲಕ್ನೊ. ಎ.15: ಮಧ್ಯಮ ಕ್ರಮಾಂಕದ ಬ್ಯಾಟರ್ ಸಿಕಂದರ್ ರಝಾ(57 ರನ್, 41 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್‌ನ 21ನೇ ಪಂದ್ಯದಲ್ಲಿ 2 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 160 ರನ್ ಗುರಿ ಪಡೆದಿರುವ ಪಂಜಾಬ್ 19.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದೆ.
ರಝಾ ಸರ್ವಾಧಿಕ ಸ್ಕೋರ್ ಗಳಿಸಿದರೆ, ಮ್ಯಾಥ್ಯೂ ಶಾರ್ಟ್(34 ರನ್, 22 ಎಸೆತ), ಹರ್‌ಪ್ರೀತ್ ಸಿಂಗ್(22 ರನ್, 22 ಎಸೆತ)ಹಾಗೂ ಶಾರೂಖ್ ಖಾನ್(ಔಟಾಗದೆ 23 ರನ್, 10 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
17 ರನ್‌ಗೆ ಆರಂಭಿಕ ಆಟಗಾರರನ್ನು ಕಳೆದುಕೊಂಡ ಪಂಜಾಬ್ ಕಳಪೆ ಆರಂಭ ಪಡೆದಿತ್ತು. 5ನೇ ವಿಕೆಟ್‌ಗೆ 37 ರನ್ ಜೊತೆಯಾಟ ನಡೆಸಿರುವ ಸಿಕಂದರ್ ಹಾಗೂ ಸ್ಯಾಮ್ ಕರನ್ ತಂಡವನ್ನು ಆಧರಿಸಿದರು.
ಲಕ್ನೊ ಪರ ರವಿ ಬಿಷ್ಣೋಯ್(2-18), ಯುದ್ಧವೀರ್ ಸಿಂಗ್(2-19)ಹಾಗೂ ಮಾರ್ಕ್ ವುಡ್(2-35)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪ್ಪಟ್ಟ ಲಕ್ನೊ ತಂಡ ನಾಯಕ ಕೆ.ಎಲ್.ರಾಹುಲ್(74 ರನ್, 56 ಎಸೆತ, 8 ಬೌಂಡರಿ, 1 ಸಿಕ್ಸರ್)ಏಕಾಂಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಸ್ಪರ್ಧಾತ್ಮಕ 8 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿದೆ.