ಐಪಿಎಲ್: ವಿಶಿಷ್ಟ ಸಾಧನೆ ಮಾಡಿದ ಹಾರ್ದಿಕ್ ಪಾಂಡ್ಯ
ಅಹಮದಾಬಾದ್: ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya ) ರವಿವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 2,000 ರನ್ ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಪಾಂಡ್ಯ ಈ ಸಾಧನೆ ಮಾಡಿದರು.
ಎಂಟನೇ ಓವರ್‌ನಲ್ಲಿ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಕೇರಂ ಬಾಲ್ ಅನ್ನು ಮಿಡ್-ಆಫ್/ಎಕ್ಸ್‌ಟ್ರಾ ಕವರ್‌ನಲ್ಲಿ ಸ್ಮ್ಯಾಶ್ ಮಾಡುವ ಮೂಲಕ ಪಾಂಡ್ಯ ಈ ಸಾಧನೆಯನ್ನು ಮಾಡಿದರು.
ಪಾಂಡ್ಯಗೆ 2,000 ರನ್‌ಗಳ ಗಡಿ ದಾಟಲು ಕೇವಲ 16 ರನ್‌ಗಳ ಅಗತ್ಯವಿತ್ತು. ಪಾಂಡ್ಯ ಇದೀಗ 2000 ರನ್ ಗಳಿಸಿ 50 ವಿಕೆಟ್‌ಗಳನ್ನು ಪಡೆದಿರುವ ಐಪಿಎಲ್ ಆಟಗಾರರ ಗಣ್ಯರ ಗುಂಪಿಗೆ ಸೇರಿಕೊಂಡಿದ್ದಾರೆ. ಒಂಬತ್ತು ವರ್ಷಗಳ ಐಪಿಎಲ್ ವೃತ್ತಿ ಜೀವನದಲ್ಲಿ ಆಲ್‌ರೌಂಡರ್ ಪಾಂಡ್ಯ 100 ಪಂದ್ಯಗಳ ಲ್ಲಿ 50 ವಿಕೆಟ್‌ಗಳನ್ನು ಪಡೆದಿದ್ದಾರೆ.
ಶೇನ್ ವ್ಯಾಟ್ಸನ್, ಆಂಡ್ರೆ ರಸೆಲ್, ರವೀಂದ್ರ ಜಡೇಜ, ಕೀರಾನ್ ಪೊಲಾರ್ಡ್ ಹಾಗೂ ಜಾಕಸ್ ಕಾಲಿಸ್ ಮಾತ್ರ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಪಾಂಡ್ಯ ಅವರ ಅತ್ಯುತ್ತಮ ಪ್ರದರ್ಶನವು ಲೀಗ್‌ನ ಅತ್ಯಂತ ಯಶಸ್ವಿ ಆಲ್‌ರೌಂಡರ್‌ಗಳಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿದೆ.