×
Ad

ಐಪಿಎಲ್: ಒಂದೇ ಕ್ಯಾಚ್ ಗಾಗಿ ಮೂವರ ಘರ್ಷಣೆ, ನಾಲ್ಕನೇ ಆಟಗಾರನಿಗೆ ಯಶಸ್ಸು

Update: 2023-04-17 10:56 IST

ಹೊಸದಿಲ್ಲಿ: ಅಹಮದಾಬಾದ್‌ನಲ್ಲಿ ರವಿವಾರ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಖಾಮುಖಿಯಲ್ಲಿ ಮೂವರು ಫೀಲ್ಡರ್‌ಗಳು ಕ್ಯಾಚ್ ಪಡೆಯುವ ಪ್ರಯತ್ನದಲ್ಲಿ ಘರ್ಷಣೆಗೆ ಸಿಲುಕಿದರೂ ಟ್ರೆಂಟ್ ಬೌಲ್ಟ್ ಅದ್ಭುತ ಕ್ಯಾಚ್ ಅನ್ನು ಪಡೆಯಲು ಯಶಸ್ವಿಯಾದರು.

ವೃದ್ಧಿಮಾನ್ ಸಹಾ ನ್ಯೂಝಿಲ್ಯಾಂಡ್ ವೇಗಿ  ಬೌಲ್ಟ್ ಎಸೆದ ಚೆಂಡನ್ನು ಕೆಣಕಲು ಹೋಗಿ  ತಪ್ಪೆಸಗಿದರು.  ಚೆಂಡು ಗಾಳಿಯಲ್ಲಿ ಮೇಲಕ್ಕೆ ಚಿಮ್ಮಿದ್ದು,  ಚೆಂಡನ್ನು ಪಡೆಯಲು  ಮೂವರು ಫೀಲ್ಡರ್‌ಗಳು ಏಕಕಾಲದಲ್ಲಿ ಮುಂದಾಗಿ ಢಿಕ್ಕಿಯಾದರು. ಚೆಂಡು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಗ್ಲೋವ್ಸ್ ಗೆ ತಗಲಿ ಬೌನ್ಸ್ ಆಯಿತು.  ಆಗ ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ , ಬೌಲ್ಟ್  ಸುಲಭ ಕ್ಯಾಚ್ ಪಡೆದರು.  ವೇಗದ ಬೌಲರ್‌ ಮತ್ತೊಮ್ಮೆ ಪವರ್ ಪ್ಲೇ ನಲ್ಲಿ ವಿಕೆಟ್ ಪಡೆದರು.

ಟಾಸ್ ಜಯಿಸಿದ ರಾಜಸ್ಥಾನ ರಾಯಲ್ಸ್ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ರಾಜಸ್ಥಾನವು ಚಾಂಪಿಯನ್ ಗುಜರಾತ್ ತಂಡವನ್ನು ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

Similar News