ಇರಾನ್ ನ ಪದಚ್ಯುತ ಮುಖಂಡರ ಪುತ್ರ ಇಸ್ರೇಲ್ ಗೆ ಭೇಟಿ
ಜೆರುಸಲೇಂ, ಎ;17: 1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಪದಚ್ಯುತಗೊಂಡ ಇರಾನ್ನ ಶಹಾ(ದೊರೆ) ಮುಹಮ್ಮದ್ ರೆಝಾ ಪಹ್ಲಾವಿಯ ಪುತ್ರ ಶಹಾ ರೆಝಾ ಪಹ್ಲಾವಿ ಈ ವಾರ ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ದೇಶಭ್ರಷ್ಟರಾಗಿರುವ ರೆಝಾ ಪಹ್ಲಾವಿ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಇರಾನ್ ತನ್ನ ಅರಬ್ ನೆರೆಹೊರೆ, ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ನವೀಕರಿಸಲು ಬಯಸುತ್ತದೆ. ದೇವರ ದಯೆಯಿಂದ ಆ ದಿನಗಳು ಸಮೀಪದಲ್ಲಿವೆ ಎಂದವರು ಹೇಳಿದ್ದಾರೆ. ಶಹಾ ರೆಝಾ ಪಹ್ಲಾವಿ ಅವರು ಇರಾನ್ಗೆ ಅಧಿಕೃತ ಭೇಟಿ ನೀಡಿದ ಇರಾನ್ನ ಅತ್ಯಂತ ಉನ್ನತ ವ್ಯಕ್ತಿಯಾಗಿದ್ದಾರೆ ಎಂದು ಇಸ್ರೇಲ್ ಸರಕಾರ ಸೋಮವಾರ ಹೇಳಿದೆ.
ಇರಾನ್ನಲ್ಲಿ ಅಮೆರಿಕ ಬೆಂಬಲಿತ ಶಹಾ ಆಡಳಿತ ವ್ಯವಸ್ಥೆ ಇದ್ದ ಸಂದರ್ಭ ಇಸ್ರೇಲ್ ಮತ್ತು ಇರಾನ್ ಮಧ್ಯೆ ಹಾರ್ದಿಕ ಸಹಕಾರ ಸಂಬಂಧವಿತ್ತು. 1971ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯಲ್ಲಿ ಶಹಾ ಆಡಳಿತ ಪದಚ್ಯುತಗೊಂಡ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದೆ. `ರೆಝಾ ಪಹ್ಲಾವಿಯ ಭೇಟಿಯು ಇಸ್ರೇಲ್ ಮತ್ತು ಇರಾನಿಯನ್ ಜನರ ಮಧ್ಯೆ ಸಂಪರ್ಕ ಹೆಚ್ಚಿಸುವ, ಅಯತೊಲ್ಲಾ ಆಡಳಿತಕ್ಕೆ ಜಂಟಿ ವಿರೋಧವನ್ನು ವ್ಯಕ್ತಪಡಿಸುವ ಸೂಚನೆಯಾಗಿದೆ ಎಂದು ಇಸ್ರೇಲ್ ಹೇಳಿದೆ.
ಈ ಭೇಟಿಯ ಸಂದರ್ಭ ಇಸ್ರೇಲ್ ಸರಕಾರದ ನೇತೃತ್ವದಲ್ಲಿ ನಡೆಯುವ `ಹತ್ಯಾಕಾಂಡ ಸ್ಮಾರಕ ಸಮಾರಂಭದಲ್ಲಿ ' ಪಹ್ಲಾವಿ ಪಾಲ್ಗೊಳ್ಳಲಿದ್ದಾರೆ ಎಂದು ಇಸ್ರೇಲ್ ಹೇಳಿದೆ.