×
Ad

ಖೈಬರ್ ಕಣಿವೆ ಭೂಕುಸಿತದಲ್ಲಿ ಕನಿಷ್ಠ 15 ಟ್ರಕ್ ಗಳ ಸಮಾಧಿ: 25ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ

Update: 2023-04-18 22:57 IST

ಪೇಶಾವರ,ಎ.18: ಸಿಡಿಲು ಹಾಗೂ ಭಾರೀ ಮಳೆಯಿಂದಾಗಿ ವಾಯವ್ಯ ಪಾಕಿಸ್ತಾನದ ಖೈಬರ್ ಕಣಿವೆಯಲ್ಲಿ ಹಾದುಹೋಗುವ ಮುಖ್ಯರಸ್ತೆಯಲ್ಲಿ ಸೋಮವಾರ ನಸುಕಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದರಿಂದ ಕನಿಷ್ಠ 10 ಟ್ರಕ್ ಗಳು ಮಣ್ಣಿನರಾಶಿಯಲ್ಲಿ ಸಮಾಧಿಯಾಗಿದ್ದು, 25ಕ್ಕೂ ಅಧಿಕ ಮಂದಿ ಸಿಲುಕಿಕೊಂಡಿರುವ ಭೀತಿಯಿದೆ.

ತೊರ್ಖಾಮ್ ಗಡಿಯ ಬಳಿಕ ಸುಮಾರು 15 ಟ್ರಕ್ ಗಳು ಸಂಪೂರ್ಣವಾಗಿ ಅಥವಾ ಭಾಗಶಃ ಮಣ್ಣಿನ ರಾಶಿಯಲ್ಲಿ ಮುಳುಗಿಹೋಗಿವೆ ಎಂದು ಖೈಬರ್ ಜಿಲ್ಲೆಯ ಉಪ ಆಯುಕ್ತ ಅಬ್ದುಲ್ ನಾಸರ್ ಖಾನ್ ತಿಳಿಸಿದ್ದಾರೆ.

ಮೂವರು ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ರಕ್ಷಣಾತಂಡಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

Similar News