×
Ad

ಐಪಿಎಲ್: ಹೈದರಾಬಾದ್ ವಿರುದ್ಧ ಅಂತಿಮ ಓವರ್ ನಲ್ಲಿ ಚೊಚ್ಚಲ ವಿಕೆಟ್ ಪಡೆದ ಅರ್ಜುನ್ ತೆಂಡುಲ್ಕರ್

Update: 2023-04-19 10:27 IST

ಮುಂಬೈ: ಮುಂಬೈ ಇಂಡಿಯನ್ಸ್ ಪರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಇತ್ತೀಚೆಗೆ  ತನ್ನ ಮೊದಲ ಪಂದ್ಯವನ್ನು ಆಡುವ  ಮೂಲಕ   ಅರ್ಜುನ್ ತೆಂಡುಲ್ಕರ್ ಅವರು ಕೊನೆಗೂ  ಐಪಿಎಲ್ ಗೆ ಪಾದಾರ್ಪಣೆಗೈದಿದ್ದರು. ಅರ್ಜುನ್ ಗೆ ತನ್ನ ಮೊದಲ ಪಂದ್ಯದಲ್ಲಿ ಯಾವುದೇ ವಿಕೆಟ್ ಉರುಳಿಸಲು ಸಾಧ್ಯವಾಗದಿದ್ದರೂ, ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಓವರ್‌ನಲ್ಲಿ. ಅರ್ಜುನ್  ವಿಕೆಟ್ ಪಡೆದಿರುವುದು ವಿಶೇಷ ವೆನಿಸಿತು.  ಹೈದರಾಬಾದ್ ಗೆ ಅಂತಿಮ ಓವರ್ ನಲ್ಲಿ ಗೆಲುವಿಗೆ 20 ರನ್‌ಗಳ ಅಗತ್ಯವಿತ್ತು. ಆಗ ಕೊನೆಯ ಓವರ್ ಬೌಲಿಂಗ್ ಮಾಡಿದ್ದ  ಅರ್ಜುನ್  ಐದನೇ ಎಸೆತದಲ್ಲಿ ಭುವನೇಶ್ವರ ಕುಮಾರ್ ಅವರನ್ನು ಔಟ್ ಮಾಡುವ  ಮೂಲಕ ತನ್ನ  ಮೊದಲ ವಿಕೆಟ್ ಪಡೆದರು. ಅದಕ್ಕೂ ಮೊದಲು, ಹೈದರಾಬಾದ್  ಬ್ಯಾಟರ್‌ಗಳನ್ನು ಕಟ್ಟಿಹಾಕಲು  ಒಂದೆರಡು ಉತ್ತಮ ಯಾರ್ಕರ್‌ಗಳನ್ನು ಎಸೆದಿದ್ದರು.

ಅರ್ಜುನ್ ಮೊದಲ ವಿಕೆಟ್ ಪಡೆದಿರುವುದಕ್ಕೆ ರೋಹಿತ್ ಶರ್ಮಾ ಸಂಭ್ರಮಪಟ್ಟರು. ಮುಂಬೈ  ಅಂತಿಮವಾಗಿ 14 ರನ್‌ಗಳಿಂದ ಪಂದ್ಯವನ್ನು  ಗೆದ್ದಿತು.

ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಮುಂಬೈ ತಂಡ ಆಲ್ ರೌಂಡರ್ . ಕ್ಯಾಮರೂನ್ ಗ್ರೀನ್ ಸಮಯೋಚಿತ ಅರ್ಧಶತಕದ ನೆರವಿನಿಂದ   ಐದು ವಿಕೆಟ್‌ಗೆ 192 ರನ್ ಗಳಿಸಿತು. ನಂತರ ಆತಿಥೇಯ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿದ್ದು, 19.5 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು.

Similar News