ಐಪಿಎಲ್ : ಕೊನೆಗೂ ಸೋಲಿನ ಸುಳಿಯಿಂದ ಹೊರಬಂದ ಡೆಲ್ಲಿ ಕ್ಯಾಪಿಟಲ್ಸ್

ಡೇವಿಡ್ ವಾರ್ನರ್ ಅರ್ಧಶತಕ

Update: 2023-04-21 04:25 GMT

ಹೊಸದಿಲ್ಲಿ, ಎ.21: ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಗುರುವಾರ ರಾತ್ರಿ 4 ವಿಕೆಟ್ ಗಳ ಅಂತರದಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷದ ಐಪಿಎಲ್ ಟೂರ್ನಿಯಲ್ಲೂ ಕೊನೆಗೂ ಗೆಲುವಿನ ಮುಖ ಕಂಡಿದೆ.

ಡೆಲ್ಲಿ ತಾನಾಡಿದ ಆರನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿದೆ.

ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು9 ವಿಕೆಟ್ ನಷ್ಟಕ್ಕೆ 129 ರನ್ ಗೆ ನಿಯಂತ್ರಿಸಿದ ಡೆಲ್ಲಿ ತಂಡ ನಾಯಕ ಡೇವಿಡ್ ವಾರ್ನರ್ ಅರ್ಧಶತಕ(57 ರನ್, 41 ಎಸೆತ) ಹಾಗೂ ಆಲ್ ರೌಂಡರ್ ಅಕ್ಷರ್ ಪಟೇಲ್ (ಔಟಾಗದೆ 19 ರನ್, 22 ಎಸೆತ) ನೆರವಿನಿಂದ 4 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ಅಂತರದ ಗೆಲುವು ದಾಖಲಿಸಿತು.

 ಕೆಕೆಆರ್ ಐಪಿಎಲ್ ನಲ್ಲಿ ಡೆಲ್ಲಿ ವಿರುದ್ಧ 2ನೇ ಕನಿಷ್ಠ ಸ್ಕೋರ್(127) ಗಳಿಸಿತು.  717 ದಿನಗಳ ನಂತರ ತವರು ಮೈದಾನದಲ್ಲಿ ಐಪಿಎಲ್ ಗೆ ವಾಪಸಾಗಿರುವ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ 19 ರನ್ ಗೆ 2 ವಿಕೆಟ್ ಪಡೆದು ಉತ್ತಮ ಪುನರಾಗಮನ ಮಾಡಿದರು.

Similar News