ಉಕ್ರೇನ್ ನಗರದ ಮೇಲೆ ರಶ್ಯದ ಬಾಂಬ್ ದಾಳಿ: ಒಬ್ಬ ಮೃತ್ಯು
Update: 2023-04-27 22:13 IST
ಕೀವ್, ಎ.27: ದಕ್ಷಿಣ ಉಕ್ರೇನ್ ನ ಮಿಕೊಲೈವ್ ನಗರದ ಮೇಲೆ ಗುರುವಾರ ಬೆಳಿಗ್ಗೆ ರಶ್ಯ ನಡೆಸಿದ ಬಾಂಬ್ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಮಗುವಿನ ಸಹಿತ ಇತರ 23 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಪ್ಪು ಸಮುದ್ರದ ಕಡೆಯಿಂದ ರಶ್ಯ ಉಡಾಯಿಸಿದ ನಾಲ್ಕು ಕಾಲಿಬರ್ ಕ್ಷಿಪಣಿಗಳು ಮನೆಗಳು, ಐತಿಹಾಸಿಕ ಮಹತ್ವದ ಕಟ್ಟಡ ಹಾಗೂ ಗಗನಚುಂಬಿ ಕಟ್ಟಡಕ್ಕೆ ಅಪ್ಪಳಿಸಿದೆ. ಪ್ರಾಥಮಿಕ ಮಾಹಿತಿಯಂತೆ ಒಬ್ಬ ಮೃತಪಟ್ಟಿದ್ದು ಇತರ 23 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಬಾಂಬ್ ದಾಳಿಯಿಂದ ತೀವ್ರವಾಗಿ ಹಾನಿಗೊಂಡಿರುವ ಕಟ್ಟಡಗಳು ಹಾಗೂ ಮನೆಗಳಿಂದ ದಟ್ಟವಾದ ಹೊಗೆ ಹರಡುತ್ತಿರುವ ವೀಡಿಯೊವನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.