×
Ad

ಐಪಿಎಲ್: ಸ್ಟೋನಿಸ್, ಮೇಯರ್ಸ್ ಅರ್ಧಶತಕ, ಲಕ್ನೊ 257/5

ಐಪಿಎಲ್‌ನಲ್ಲಿ ದಾಖಲಾದ 2ನೇ ಗರಿಷ್ಠ ಸ್ಕೋರ್

Update: 2023-04-28 21:27 IST

  ಮೊಹಾಲಿ, ಎ.28: ಮಾರ್ಕಸ್ ಸ್ಟೋನಿಸ್(72 ರನ್, 40 ಎಸೆತ, 6 ಬೌಂಡರಿ, 5 ಸಿಕ್ಸರ್), ಕೈಲ್ ಮೇಯರ್ಸ್(54 ರನ್, 24 ಎಸೆತ,7 ಬೌಂಡರಿ, 4 ಸಿಕ್ಸರ್)ಭರ್ಜರಿ ಅರ್ಧಶತಕ, ,ನಿಕೊಲಸ್ ಪೂರನ್(45 ರನ್,19 ಎಸೆತ, 7 ಬೌಂಡರಿ, 1 ಸಿಕ್ಸರ್ ) ಹಾಗೂ ಆಯುಷ್ ಬದೋನಿ(43 ರನ್, 24 ಎಸೆತ, 3 ಬೌಂಡರಿ, 3 ಸಿಕ್ಸರ್)ಸಮಯೋಚಿತ ಬ್ಯಾಟಿಂಗ್ ಬಲದಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಆತಿಥೇಯ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ 258 ರನ್ ಗುರಿ ನೀಡಿದೆ.

 ಶುಕ್ರವಾರ ನಡೆದ 38ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೊ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ.
ಇದು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ತಂಡವೊಂದು ಗಳಿಸಿರುವ ಎರಡನೇ ಗರಿಷ್ಠ ಮೊತ್ತವಾಗಿದೆ. 2013ರಲ್ಲಿ ಆರ್‌ಸಿಬಿ ತಂಡವು ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಕಲೆ ಹಾಕಿತ್ತು.

ಪಂಜಾಬ್ ಪರ ವೇಗಿ ಕಾಗಿಸೊ ರಬಾಡ(2-52)ಯಶಸ್ವಿ ಪ್ರದರ್ಶನ ನೀಡಿದರು.

Similar News