ಐಪಿಎಲ್: ಅಮೋಘ ಸಾಧನೆ ಮೂಲಕ ದಾಖಲೆ ಬರೆದ ಜೈಸ್ವಾಲ್

Update: 2023-05-08 04:10 GMT

ಹೈದರಾಬಾದ್: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅಮೋಘ ಸಾಧನೆ ಮೂಲಕ ಗಮನ ಸೆಳೆದಿರುವ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಐಪಿಎಲ್‍ನಲ್ಲಿ 1000 ರನ್ ಪೂರೈಸಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಶನಿವಾರ ಸನ್‍ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ ಈ ಮೈಲಿಗಲ್ಲು  ತಲುಪಿದರು.

20 ವರ್ಷ 218 ದಿನ ಆಗಿದ್ದಾಗ 1000 ಐಪಿಎಲ್ ರನ್ ಗಳಿಸಿದ ರಿಷಭ್‍ಪಂತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೈಸ್ವಾಲ್ 21 ವರ್ಷ 130 ದಿನದಲ್ಲಿ ಈ ಸಾಧನೆ ಮಾಡಿದ್ದರೆ, ಪೃಥ್ವಿ ಶಾ ಮೂರನೇ ಸ್ಥಾನಲ್ಲಿದ್ದಾರೆ.

ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ 2 ವಿಕೆಟ್ ನಷ್ಟಕ್ಕೆ 214 ರನ್‍ಗಳನ್ನು ಪೇರಿಸಿತು. ಮೊದಲ ವಿಕೆಟ್‍ಗೆ 54 ರನ್‍ಗಳನ್ನು ತಂಡ ಕಲೆಹಾಕಿತು. ಈ ಪೈಕಿ ಜೈಸ್ವಾಲ್ 35 ರನ್ ಗಳಿಸಿದರು. 

Similar News