ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಕಿಂಗ್ಸ್ ಜಯಭೇರಿ

Update: 2023-05-10 17:54 GMT

  ಚೆನ್ನೈ, ಮೇ 10: ಐಪಿಎಲ್‌ನ 55ನೇ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 27 ರನ್ ಅಂತರದಿಂದ ಮಣಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 168 ರನ್ ಗುರಿ ಪಡೆದಿದ್ದ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡೆಲ್ಲಿ ಪರ ರಿಲೀ ರೊಸ್ಸೌ(35 ರನ್, 37 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಮನೀಶ್ ಪಾಂಡೆ(27 ರನ್, 29 ಎಸೆತ), ಅಕ್ಷರ್ ಪಟೇಲ್ (21 ರನ್, 12 ಎಸೆತ)ಹಾಗೂ ಫಿಲ್ ಸಾಲ್ಟ್(17 ರನ್, 11 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ಡೇವಿಡ್ ವಾರ್ನರ್ ರನ್ ಖಾತೆ ತೆರೆಯಲು ವಿಫಲರಾದರು.

ಚೆನ್ನೈ ಪರ ಮಥೀಶ ಪಥಿರನ(3-37) ಹಾಗೂ ದೀಪಕ್ ಚಹಾರ್(2-28) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

ಆಲ್‌ರೌಂಡರ್ ಶಿವಂ ದುಬೆ(25 ರನ್, 12 ಎಸೆತ, 3 ಸಿಕ್ಸರ್)ಚೆನ್ನೈ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಋತುರಾಜ್ ಗಾಯಕ್ವಾಡ್(24 ರನ್, 18 ಎಸೆತ),ಅಂಬಟಿ ರಾಯುಡು(23 ರನ್, 17 ಎಸೆತ), ಅಜಿಂಕ್ಯ ರಹಾನೆ(21 ರನ್, 20 ಎಸೆತ), ರವೀಂದ್ರ ಜಡೇಜ(21 ರನ್, 16 ಎಸೆತ)ಹಾಗೂ ಎಂಎಸ್ ಧೋನಿ(20 ರನ್, 9 ಎಸೆತ) ತಲಾ ಎರಡಂಕೆಯ ಸ್ಕೋರ್ ಗಳಿಸಿದರು.

ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ವೇಗಿ ಮಿಚೆಲ್ ಮಾರ್ಷ್(3-18) ಯಶಸ್ವಿ ಪ್ರದರ್ಶನ ನೀಡಿದರೆ, ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್(2-27), ಕುಲದೀಪ್ ಯಾದವ್(1-28) ಹಾಗೂ ಲಲಿತ್ ಯಾದವ್ (1-34) ತಲಾ ಒಂದು ವಿಕೆಟ್‌ಗಳನ್ನು ಹಂಚಿಕೊಂಡರು.
 

Similar News