ಅತ್ಯಂತ ಅಪೇಕ್ಷಣೀಯ ಪಾಸ್‍ಪೋರ್ಟ್ ಯುಎಇಗೆ ಅಗ್ರಸ್ಥಾನ
ನ್ಯೂಯಾರ್ಕ್, ಮೇ 16: ಈ ವರ್ಷದ ಅತ್ಯಂತ ಅಪೇಕ್ಷಣೀಯ ಪಾಸ್‍ಪೋರ್ಟ್‍ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಯುಎಇ ಅಗ್ರಸ್ಥಾನದಲ್ಲಿದೆ ಎಂದು `ನೊಮಾಡ್ ಕ್ಯಾಪಿಟಲಿಸ್ಟ್' ಸಲಹಾ ಸಂಸ್ಥೆಯ ವರದಿ ಹೇಳಿದೆ.
ವೀಸಾ ಮುಕ್ತ ಪ್ರಯಾಣದ ಅವಕಾಶಗಳು, ನಾಗರಿಕರ ತೆರಿಗೆ, ಉಭಯ ಪೌರತ್ವ ಸಾಧ್ಯತೆಗಳು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಗ್ರಹಿಕೆ- ಈ ಐದು ಮಾನದಂಡಗಳ ಆಧಾರದಲ್ಲಿ 199 ದೇಶಗಳ ಸಾಧನೆಯನ್ನು ಪರಿಶೀಲಿಸಿ ಈ ಶ್ರೇಯಾಂಕಪಟ್ಟಿಯನ್ನು ರಚಿಸಲಾಗಿದೆ.
ಕಳೆದ ವರ್ಷ 35ನೇ ಸ್ಥಾನದಲ್ಲಿದ್ದ ಯುಎಇ ಅಗ್ರಸ್ಥಾನ ಗಳಿಸಿದ್ದು ಒಟ್ಟು 110.50 ಅಂಕ ಗಳಿಸಿದೆ. ಯುಎಇ ಪಾಸ್‍ಪೋರ್ಟ್ ವ್ಯಾಪಾರ ಸ್ನೇಹಿ ಪರಿಸರ, ಅಪೇಕ್ಷಣೀಯ ತೆರಿಗೆ ವ್ಯವಸ್ಥೆಯಿಂದ ಒದಗಿಸಲಾದ ಪ್ರಯಾಣ ಸ್ವಾತಂತ್ರ್ಯ, ವಿದೇಶಿಯರಿಗೆ ಉಭಯ ಪೌರತ್ವಕ್ಕೆ ಸಲ್ಲಿಸಲು ಅನುಮತಿಸುವ ಇತ್ತೀಚಿನ ಬದಲಾವಣೆಯಿಂದಾಗಿ ಶ್ರೇಯಾಂಕವನ್ನು ಉತ್ತಮಪಡಿಸಿಕೊಂಡಿದೆ ಎಂದು ವರದಿ ಹೇಳಿದೆ.
ನಂತರದ 10ರವರೆಗಿನ ಸ್ಥಾನಗಳಲ್ಲಿ ಅನುಕ್ರಮವಾಗಿ ಲಕ್ಸೆಂಬರ್ಗ್, ಸ್ವಿಝರ್ಯ್ಲಾಂಡ್, ಐರ್‍ಲ್ಯಾಂಡ್, ಪೋರ್ಚುಗಲ್, ಜರ್ಮನಿ, ಝೆಕ್ ಗಣರಾಜ್ಯ, ನ್ಯೂಝಿಲ್ಯಾಂಡ್, ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೇಶಗಳಿವೆ.