×
Ad

ಬಂಧನದಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯದ ಒಳಗೆ ಓಡಿದ ಇಮ್ರಾನ್ ಖಾನ್ ಆಪ್ತ

Update: 2023-05-16 23:34 IST

ಇಸ್ಲಮಾಬಾದ್, ಮೇ 16: ತನ್ನನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎಂಬ ಭೀತಿಯಲ್ಲಿ ಇಮ್ರಾನ್‍ಖಾನ್ ಆಪ್ತ, ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ನ್ಯಾಯಾಲಯದ ಒಳಗೆ ಓಡಿಹೋದ ದೃಶ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕಳೆದ ವಾರ ಇಮ್ರಾನ್ ಬಂಧನದ ಬಳಿಕ ದೇಶದಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಫವಾದ್ ಚೌಧರಿಯನ್ನು ಬಂಧಿಸಲಾಗಿತ್ತು. ಅವರಿಗೆ ಇಸ್ಲಮಾಬಾದ್ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರುಗೊಳಿಸಿದ್ದರಿಂದ ಬಿಡುಗಡೆಗೊಂಡಿದ್ದರು. ಬಳಿಕ ತನ್ನ ಕಾರಿನಲ್ಲಿ ಕುಳಿತು ನ್ಯಾಯಾಲಯದಿಂದ ಹೊರಡಲು ಅಣಿಯಾಗುತ್ತಿದ್ದಂತೆಯೇ ನ್ಯಾಯಾಲಯದ ಆವರಣದಲ್ಲಿದ್ದ ಪೊಲೀಸರು ಮತ್ತೆ ತಮ್ಮನ್ನು ಬಂಧಿಸಬಹುದು ಎಂಬ ಶಂಕೆ ಅವರಲ್ಲಿ ಮೂಡಿದೆ. ಆದ್ದರಿಂದ ರಕ್ಷಣೆಗಾಗಿ ನ್ಯಾಯಾಲಯದ ಒಳಗೆ ಓಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Similar News