ಗಯಾನ: ಶಾಲೆಯ ವಸತಿನಿಲಯದಲ್ಲಿ ಬೆಂಕಿ ದುರಂತ: 20 ಮಂದಿ ಮೃತ್ಯು

Update: 2023-05-22 16:36 GMT

ಜಾರ್ಜ್ ಟೌನ್, ಮೇ 22: ಮಧ್ಯ ಗಯಾನದ ಮಾಹ್ದಿಯಾ  ಪ್ರಾಂತದ ಮಾಧ್ಯಮಿಕ ಶಾಲೆಯ ವಸತಿಗೃಹದಲ್ಲಿ ರವಿವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಟ 20 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

ಇದೊಂದು ಭಯಾನಕ, ನೋವಿನಿಂದ ಕೂಡಿದ ದೊಡ್ಡ ದುರಂತವಾಗಿದೆ ಎಂದು ಆಘಾತ ವ್ಯಕ್ತಪಡಿಸಿರುವ ಅಧ್ಯಕ್ಷ ಇರ್ಫಾನ್ ಆಲಿ, ಗಾಯಗೊಂಡಿರುವ ಪ್ರತಿಯೊಂದು ಮಗುವಿಗೂ ರಾಜಧಾನಿ ಜಾರ್ಜ್ ಟೌನ್ ನ 2 ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತಾಗಿ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಜಾರ್ಜ್ ಟೌನ್ ನ ದಕ್ಷಿಣಕ್ಕೆ ಸುಮಾರು 200 ಕಿ.ಮೀ ದೂರದಲ್ಲಿರುವ ಮಹ್ದಿಯಾ ನಗರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಖಾಸಗಿ ಮತ್ತು ಮಿಲಿಟರಿ ವಿಮಾನಗಳನ್ನು ಬಳಸಲಾಗಿದೆ ಎಂದು ಮೂಲಗಳು ಹೇಳಿವೆ.

Similar News