ಎವರೆಸ್ಟ್ ಶಿಖರ ಏರಿದ ಬಳಿಕ ಕುಸಿದುಬಿದ್ದು ಮೃತಪಟ್ಟ ಆಸ್ಟ್ರೇಲಿಯಾ ಪ್ರಜೆ

Update: 2023-05-22 16:39 GMT

ಕಠ್ಮಂಡು, ಮೇ 22: ಜಗತ್ತಿನ ಅತೀ ಎತ್ತರದ ಎವರೆಸ್ಟ್ ಪರ್ವತವನ್ನು ಯಶಸ್ವಿಯಾಗಿ ಏರಿದ ಆಸ್ಟ್ರೇಲಿಯಾದ ಪ್ರಜೆ, ಶಿಖರದಿಂದ ಕೆಳಗಿಳಿಯುವ ಸಂದರ್ಭ ಕುಸಿದುಬಿದ್ದು ಮೃತಪಟ್ಟಿರುವುದಾಗಿ `ದಿ ಗಾರ್ಡಿಯನ್' ವರದಿ ಮಾಡಿದೆ.

ಪರ್ತ್ ನಿವಾಸಿ ಜೇಸನ್ ಬರ್ನಾರ್ಡ್ ಕೆನಿನ್ಸನ್ ಎಂಬಾತ 8,849 ಮೀಟರ್ ಎತ್ತರದ ಎವರೆಸ್ಟ್ ನ ತುತ್ತತುದಿಯನ್ನು ಶುಕ್ರವಾರ ಯಶಸ್ವಿಯಾಗಿ ಏರಿದ್ದಾರೆ. ಆದರೆ ಶಿಖರದಿಂದ ಕೆಳಗಿಳಿಯುವ ಸಂದರ್ಭ ತೀವ್ರ ಅಸ್ವಸ್ಥಗೊಂಡರು. ತಕ್ಷಣ ಅವರ ಜತೆಗಿದ್ದ ಇಬ್ಬರು ಶೆರ್ಪಾ ಗೈಡ್ಗಳು ಜೇಸನ್ ನನ್ನು ಸಮುದ್ರ ಮಟ್ಟದಿಂದ 8,400 ಮೀಟರ್ ಎತ್ತರದಲ್ಲಿರುವ ಬಾಲ್ಕನಿ ಪ್ರದೇಶಕ್ಕೆ ಕರೆತಂದಿದ್ದಾರೆ. ಆದರೆ ಚೇತರಿಸಿಕೊಳ್ಳದ ಜೇಸನ್ ಕೊನೆಯುಸಿರೆಳೆದರು ಎಂದು ಏಶಿಯನ್ ಪರ್ವತಾರೋಹಣ ಸಂಸ್ಥೆಯ ಮುಖ್ಯಸ್ಥ ದವಾ ಸ್ಟೀವನ್ ಶೆರ್ಪರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Similar News