ಫಿಲಿಪ್ಪೀನ್ಸ್: ಐತಿಹಾಸಿಕ ಅಂಚೆಕಚೇರಿ ಕಟ್ಟಡಕ್ಕೆ ಬೆಂಕಿ

Update: 2023-05-22 17:52 GMT

ಮನಿಲಾ, ಮೇ 22: ಫಿಲಿಪ್ಪೀನ್ಸ್ ರಾಜಧಾನಿ ಮನೀಲಾದಲ್ಲಿರುವ ಐತಿಹಾಸಿಕ ಅಂಚೆಕಚೇರಿ ರವಿವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ನಾಶವಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಮನಿಲಾ ಸೆಂಟ್ರಲ್ ಪೋಸ್ಟ್ ಆಫೀಸ್ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಆಕಾಶದೆತ್ತರಕ್ಕೆ ಕಪ್ಪುಹೊಗೆಯ ಮೋಡ ಆವರಿಸಿತ್ತು. 80ಕ್ಕೂ ಅಧಿಕ ಅಗ್ನಿಶಾಮಕ ಯಂತ್ರಗಳು 7 ಗಂಟೆಗೂ ಅಧಿಕ  ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಿವೆ. ಆದರೆ ಕೆಳ ಅಂತಸ್ತಿನಿಂದ 5ನೇ ಮಹಡಿಯವರೆಗೆ ಕಟ್ಟಡ ಸಂಪೂರ್ಣ ಸುಟ್ಟುಹೋಗಿದೆ. ಅಗ್ನಿಶಾಮಕ ದಳದ ಒಬ್ಬ ಸಿಬಂದಿಗೆ ಗಾಯವಾಗಿದೆ.

ಬೆಂಕಿ ದುರಂತದ ಬಗ್ಗೆ ತನಿಖೆಗೆ ಸರಕಾರ ಆದೇಶಿಸಿದೆ ಎಂದು ಪ್ರಧಾನ ಪೋಸ್ಟ್ಮಾಸ್ಟರ್ ಲೂಯಿಸ್ ಕಾರ್ಲೋಸ್ರನ್ನು ಉಲ್ಲೇಖಿಸಿದ ವರದಿ ಹೇಳಿದೆ. ಪತ್ರಗಳು, ಪಾರ್ಸೆಲ್ಗಳು ಹಾಗೂ ಸಂಪೂರ್ಣ ಸ್ಟ್ಯಾಂಪ್ಗಳ ಸಂಗ್ರಹ ಬೆಂಕಿ ದುರಂತದಲ್ಲಿ ನಾಶಗೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1926ರಲ್ಲಿ ನಿರ್ಮಾಣಗೊಂಡಿದ್ದ ಈ ಅಂಚೆಕಚೇರಿ ಎರಡನೆ ಮಹಾಯುದ್ಧದ ಸಂದರ್ಭ ಹಾನಿಗೊಂಡಿತ್ತು. ಜಪಾನ್ನ ವಶದಲ್ಲಿದ್ದ ಮನಿಲಾವನ್ನು 1946ರಲ್ಲಿ ಅಮೆರಿಕ ಪಡೆ ಮರುಸ್ವಾಧೀನ ಪಡೆದುಕೊಂಡಾಗ ಈ ಕಟ್ಟಡ ಹಾನಿಗೊಂಡಿತ್ತು. ಬಳಿಕ ಇದನ್ನು 1946ರಲ್ಲಿ ಮರು ನಿರ್ಮಾಣ ಮಾಡಲಾಗಿತ್ತು. 

ಈ ಕಟ್ಟಡವನ್ನು `ಪ್ರಮುಖ ಸಾಂಸ್ಕøತಿಕ ಆಸ್ತಿ' ಎಂದು ಫಿಲಿಪ್ಪೀನ್ಸ್ನ ರಾಷ್ಟ್ರೀಯ ಮ್ಯೂಸಿಯಂ ಘೋಷಿಸಿತ್ತು.

Similar News