ಇಮ್ರಾನ್ ಖಾನ್ ಪಕ್ಷ ನಿಷೇಧಕ್ಕೆ ಚಿಂತನೆ: ಪಾಕ್ ರಕ್ಷಣಾ ಸಚಿವ ಆಸಿಫ್

Update: 2023-05-24 17:51 GMT

ಇಸ್ಲಮಾಬಾದ್, ಮೇ 24: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ರಾಜಕೀಯ ಪಕ್ಷ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷವನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸಿಫ್ ಬುಧವಾರ ಹೇಳಿದ್ದಾರೆ.

ಮೇ 9ರಂದು ಇಮ್ರಾನ್ ಬಂಧನದ ಬಳಿಕ ಪಿಟಿಐ ಕಾರ್ಯಕರ್ತರು ದೇಶದಾದ್ಯಂತ ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದವರು ಹೇಳಿದ್ದಾರೆ. ಪರಮಾಣು ಶಕ್ತ ದೇಶದಲ್ಲಿ ರಾಜಕೀಯ ಅಸ್ಥಿರತೆ ಮೂಡಿಸುವ ಉದ್ದೇಶವನ್ನು ಪಿಟಿಐ ಹೊಂದಿದೆ ಎಂದವರು ಆರೋಪಿಸಿದ್ದಾರೆ.

ಪಿಟಿಐ ನಿಷೇಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಆದರೆ ಖಂಡಿತವಾಗಿಯೂ ಪರಿಶೀಲನೆ ನಡೆಯುತ್ತಿದೆ. ಸರಕಾರವು ನಿಷೇಧದ ಬಗ್ಗೆ ನಿರ್ಧರಿಸಿದರೆ ಈ ವಿಷಯವನ್ನು ಸಂಸತ್ತಿನಲ್ಲಿ ಅನುಮೋದನೆಗಾಗಿ ಉಲ್ಲೇಖಿಸಲಾಗುತ್ತದೆ.  ದೇಶದ ತಳಹದಿಯ ಮೇಲೆ ಪಿಟಿಐ ದಾಳಿ ಎಸಗಿದೆ. ಹಿಂದೆಂದೂ ಇದು ಸಂಭವಿಸಿಲ್ಲ ಮತ್ತು ಇದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಇಮ್ರಾನ್ ಸೇನೆಯನ್ನು ತಮ್ಮ ಎದುರಾಳಿ ಎಂದು ಭಾವಿಸಿದ್ದಾರೆ. ಅವರ ಸಂಪೂರ್ಣ ರಾಜಕೀಯ ಸೇನೆಯ ಮಡಿಲಲ್ಲಿ ಮಾಡಲಾಗಿತ್ತು, ಆದರೆ ಈಗ ಅವರು ಸೇನೆಯ ವಿರುದ್ಧ ನಿಂತಿದ್ದಾರೆ. ಮೇ 9ರಂದು ದೇಶದಾದ್ಯಂತ ಮಿಲಿಟರಿ ಸ್ಥಾಪನೆಗಳ ವಿರುದ್ಧದ ವಿಧ್ವಂಸಕ ಕೃತ್ಯವು ಇಮ್ರಾನ್ ಖಾನ್ ಯೋಜಿಸಿದ ಸಂಘಟಿತ ದಾಳಿಯಾಗಿತ್ತು ಎಂದು ಆಸಿಫ್ ಆರೋಪಿಸಿದ್ದಾರೆ. 

ಇಮ್ರಾನ್ ಬಂಧನದ ಬಳಿಕ ದೇಶದಾದ್ಯಂತ ಭುಗಿಲೆದ್ದ ಹಿಂಸಾಚಾರದಲ್ಲಿ ಸೇನೆಯ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು ಮತ್ತು ಸರಕಾರದ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿತ್ತು

Similar News