ರಶ್ಯ- ಚೀನಾ ದ್ವಿಪಕ್ಷೀಯ ಮಾತುಕತೆ: ಹಲವು ಒಪ್ಪಂದಗಳಿಗೆ ಸಹಿ

Update: 2023-05-24 18:03 GMT

ಬೀಜಿಂಗ್, ಮೇ 24: ಪಾಶ್ಚಿಮಾತ್ಯರ ತೀವ್ರ ಟೀಕೆ, ವಿರೋಧದ ನಡುವೆಯೇ ರಶ್ಯ ಮತ್ತು ಚೀನಾದ ಮುಖಂಡರು ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಚೀನಾಕ್ಕೆ ಭೇಟಿ ನೀಡಿರುವ ರಶ್ಯದ ಪ್ರಧಾನಿ ಮಿಖಾಯಿಲ್ ಮಿಷುಟ್ಸಿನ್ ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ಮತ್ತು ಪ್ರೀಮಿಯರ್ ಲಿ ಖ್ವಿಯಾಂಗ್ ಜತೆ ಮಾತುಕತೆ ನಡೆಸಿದರು. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಶ್ಯದ ವಿರುದ್ಧ ಪಾಶ್ಚಿಮಾತ್ಯರ ನಿರ್ಬಂಧದ ಕುಣಿಕೆ ಬಿಗಿಯಾಗುತ್ತಿರುವ ಹಿನ್ನೆಲೆಯಲ್ಲಿ ರಶ್ಯವು ಚೀನಾದ ಬೆಂಬಲವನ್ನು ಎದುರು ನೋಡುತ್ತಿದೆ.

ಈಗ ಉಭಯ ದೇಶಗಳ ನಡುವಿನ ಅಸಾಮಾನ್ಯವಾಗಿ ಉನ್ನತ ಮಟ್ಟದಲ್ಲಿದೆ. ಇದು ಪರಸ್ಪರರ ಹಿತಾಸಕ್ತಿಗೆ ಪರಸ್ಪರ ಗೌರವ, ಸವಾಲುಗಳಿಗೆ ಜಂಟಿಯಾಗಿ ಪ್ರತಿಕ್ರಿಯಿಸುವ ಬಯಕೆಯಿಂದ ನಿರೂಪಿಸಲ್ಪಟ್ಟಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದ ಗೊಂದಲ ಮತ್ತು ಪಾಶ್ಚಿಮಾತ್ಯರ ಕಾನೂನುಬಾಹಿರ ನಿರ್ಬಂಧಗಳ ಒತ್ತಡಕ್ಕೆ ಸಂಬಂಧಿಸಿದೆ' ಎಂದು  ಮಿಖಾಯಿಲ್ ಮಿಷುಟ್ಸಿನ್ ಹೇಳಿದ್ದಾರೆ.

ವ್ಯಾಪಾರ ಸೇವೆಗಳಲ್ಲಿ ಹೂಡಿಕೆ ಸಹಕಾರವನ್ನು ಗಾಢಗೊಳಿಸುವ ಒಪ್ಪಂದ, ಚೀನಾದ ಕೃಷಿ ಉತ್ಪನ್ನಗಳ ರಫ್ತು, ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಈ ಸಂದರ್ಭ ಸಹಿ ಹಾಕಲಾಗಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ. 

Similar News