ಪ್ರತೀ ಸಿಗರೇಟ್ ನ ಮೇಲೂ ಎಚ್ಚರಿಕೆ ಸಂದೇಶ ಹಾಕಲು ಕೆನಡಾ ನಿರ್ಧಾರ

Update: 2023-06-01 17:05 GMT

ಒಟ್ಟಾವ: ಇದುವರೆಗೆ ಸಿಗರೇಟ್ ಪ್ಯಾಕ್ ನ ಮೇಲೆ ಹಾಕಲಾಗುತ್ತಿದ್ದ ಆರೋಗ್ಯ ಎಚ್ಚರಿಕೆ ಸಂದೇಶವನ್ನು ಪ್ರತೀ ಸಿಗರೇಟ್ನ ಮೇಲೂ ಹಾಕಲು ಕೆನಡಾ ಸರಕಾರ ನಿರ್ಧರಿಸಿದ್ದು, ಈ ರೀತಿ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎನಿಸಿಕೊಳ್ಳಲಿದೆ.

ಆರೋಗ್ಯ ಎಚ್ಚರಿಕೆಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಅಸಾಧ್ಯ ಎಂದು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆನಡಾ ಸರಕಾರ ಹೇಳಿದೆ.

ಹೊಸ ನಿಯಮ ಈ ವರ್ಷದ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆಯಿಂದ ಪ್ರತೀ ವರ್ಷ ಕೆನಡಾದಲ್ಲಿ  48,000 ಜನ ಸಾವನ್ನಪ್ಪುತ್ತಿದ್ದಾರೆ. ಪ್ರತೀ ಸಿಗರೇಟ್ಗಳ ಮೇಲೆ ಆರೋಗ್ಯ ಎಚ್ಚರಿಕೆಯ ಸಂದೇಶ ರವಾನಿಸುವ ವಿಶ್ವದ ಮೊದಲ ದೇಶವಾಗಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಈ ದಿಟ್ಟ ಹೆಜ್ಜೆಯು ಆರೋಗ್ಯ ಎಚ್ಚರಿಕೆ ಸಂದೇಶಗಳನ್ನು ವಾಸ್ತವಿಕವಾಗಿ ಅನಿವಾರ್ಯಗೊಳಿಸುತ್ತದೆ ಮತ್ತು ಪ್ಯಾಕೆಟ್ ನಲ್ಲಿ ಪ್ರದರ್ಶಿಸುವ ನವೀಕೃತ ಗ್ರಾಫಿಕ್ಸ್ ಚಿತ್ರಗಳು ಧೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ ಎಂದು ಕೆನಡಾ ಆರೋಗ್ಯ ಇಲಾಖೆಯ ಸಹಾಯಕ ಸಚಿವೆ ಕ್ಯಾರೊಲಿನ್ ಬೆನೆಟ್ ಹೇಳಿದ್ದಾರೆ.

Similar News