ಕಂದರದಲ್ಲಿ ಮಾನವ ದೇಹದ ಭಾಗಗಳಿದ್ದ 45 ಚೀಲ ಪತ್ತೆ

Update: 2023-06-02 17:01 GMT

ಮೆಕ್ಸಿಕೋ ಸಿಟಿ: ಪಶ್ಚಿಮ ಮೆಕ್ಸಿಕೋದ ಜಲಿಸ್ಕೋ ರಾಜ್ಯದಲ್ಲಿ ಕಳೆದ ವಾರ ನಾಪತ್ತೆಯಾಗಿದ್ದ 7 ಯುವಜನರನ್ನು ಹುಡುಕುತ್ತಿದ್ದ ಸಂದರ್ಭ ಕಂದರವೊಂದರಲ್ಲಿ ಮಾನವ ದೇಹದ ಭಾಗಗಳಿದ್ದ ಕನಿಷ್ಟ 45 ಬ್ಯಾಗ್‌ಗಳು ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಮೇ 20ರಿಂದ ಇಬ್ಬರು ಮಹಿಳೆಯರು ಹಾಗೂ ಐವರು ಪುರುಷರು ನಾಪತ್ತೆಯಾಗಿದ್ದು ಅವರಿಗಾಗಿ ಝಪೋಪನ್ ಎಂಬ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಅಲ್ಲಿ 120 ಅಡಿ ಆಳದ  ಕಂದರದಲ್ಲಿ  45 ಗೋಣಿಚೀಲಗಳಲ್ಲಿ ಮಾನವ ದೇಹಗಳನ್ನು ತುಂಬಿಸಿ ಎಸೆದಿರುವುದು ಪತ್ತೆಯಾಗಿದೆ. ಇದರಲ್ಲಿ ಕೆಲವು ಮಹಿಳೆಯರ ಮೃತದೇಹಗಳ ಭಾಗಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಈ ಏಳೂ ಮಂದಿ ಕಾಲ್‌ಸೆಂಟರ್ ಒಂದರ ಉದ್ಯೋಗಿಗಳಾಗಿದ್ದರು. ಇವರು ನಾಪತ್ತೆಯಾಗಿರುವ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ  ಈ ಕಾಲ್‌ಸೆಂಟರ್‌ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಸಾಧ್ಯತೆಯಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮಾದಕವಸ್ತುಗಳ ಪ್ಯಾಕೆಟ್ ಕೂಡಾ ಪತ್ತೆಯಾಗಿರುವುದು ಈ ಸಾಧ್ಯತೆಗೆ ಪುಷ್ಟಿ ನೀಡಿದೆ  ಆದರೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  

Similar News