"ಮುಂದಿನ 2 ವರ್ಷಗಳಲ್ಲಿ ಮಾನವರನ್ನೇ ಕೊಲ್ಲುವಷ್ಟು ಕೃತಕ ಬುದ್ಧಿಮತ್ತೆ ಶಕ್ತಿಯುತವಾಗಲಿದೆ"

ಬ್ರಿಟನ್ ಪ್ರಧಾನಿಯ ಸಲಹೆಗಾರರ ಎಚ್ಚರಿಕೆ

Update: 2023-06-06 18:03 GMT

ಲಂಡನ್,ಜೂ.6:ಮುಂದಿನ ಎರಡು ವರ್ಷಗಳೊಳಗೆ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ವ್ಯವಸ್ಥೆಗಳು ಮಾನವರನ್ನು ‘ಕೊಲ್ಲುವಷ್ಟು’ ಶಕ್ತಿಯುತವಾಗಲಿವೆ ಎಂದು ಬ್ರಿಟನ್ ಪ್ರಧಾನಿ ರಿಶಿ ಸುನಕ್ ಅವರ ಸಲಹೆಗಾರರೊಬ್ಬರು ಎಚ್ಚರಿಕೆ ನೀಡಿದ್ದಾರೆಂದು ಇಂಡಿಪೆಂಡೆಂಟ್ ಪತ್ರಿಕೆ ಮಂಗಳವಾರ ವರದಿ ಮಾಡಿದೆ.

ಚ್ಯಾಟ್ಜಿಪಿಟಿ ಹಾಗೂ ಗೂಗಲ್ ಬಾರ್ಡ್ನಂತಹ ಕೃತಕ ಬುದ್ದಿಮತ್ತೆ ಭಾಷಾ ಮಾದರಿಗಳ ತನಿಖೆ ನಡೆಸುವ ಬ್ರಿಟನ್ ಸರಕಾರದ ಮಾದರಿ  ಕಾರ್ಯಪಡೆಯ ಮುಖ್ಯಸ್ಥರಾದ ಮ್ಯಾಟ್ ಕ್ಲಿಫರ್ಡ್ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ.

ಕೃತಕಬುದ್ದಿಮತ್ತೆಯು ಸೈಬರ್ ಹಾಗೂ ಜೈವಿಕ ಅಸ್ತ್ರಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು,  ಅವುಗಳಿಂದ ಹಲವಾರು ಸಾವುಗಳು ಸಂಭವಿಸಬಹುದಾಗಿದೆ. ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆಗಳ ತಯಾರಕರನ್ನು ನಿಯಂತ್ರಿಸದೆ ಇದ್ದಲ್ಲಿ, ಮಾನವಕುಲಕ್ಕೆ ಅಪಾಯ ಎದುರಾಗಲಿದೆ ಎಂದು ಅವರು ಟಾಕ್ಟಿವಿಗೆ ನೀಡಿದ ಸಂದರ್ಶನದಲ್ಲಿ  ಹೇಳಿದ್ದಾರೆ.

ಕೃತಕ ಬುದ್ದಿಮತ್ತೆಯನ್ನು ನೂತನ ಖಾದ್ಯಪದಾರ್ಥಗಳನ್ನು ತಯಾರಿಸುವುದರಿಂದ ಹಿಡಿದು ಜೈವಿಕ ಅಸ್ತ್ರಗಳನ್ನು ತಯಾರಿಸಲು ಅಥವಾ ದೊಡ್ಡ ಮಟ್ಟದ ಸೈಬರ್ ದಾಳಿಗಳನ್ನು ನಡೆಸಲು ಬಳಸಬಹುದಾಗಿದೆ. ಇವು ದುರದೃಷ್ಟಕರ’’ ಎಂದು ಕ್ಲಿಫರ್ಡ್ ಅವರು  ಸಂದರ್ಶನದಲ್ಲಿ ಹೇಳಿದ್ದಾರೆ.

Similar News