ಇಸ್ರೇಲ್: ಡ್ರೋನ್ ಟ್ಯಾಕ್ಸಿ ಪ್ರಯೋಗಾರ್ಥ ಪರೀಕ್ಷೆ; ಟ್ರಾಫಿಕ್ ಕಿರಿಕಿರಿಗೆ ಪರಿಹಾರದ ನಿರೀಕ್ಷೆ

Update: 2023-06-07 16:51 GMT

ಟೆಲ್ಅವೀವ್ : ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮಾರ್ಗೋಪಾಯವಾಗಿ, ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಸಾಗಿಸಲು ವಿಶೇಷವಾಗಿ ರೂಪಿಸಲಾಗಿರುವ ಡ್ರೋನ್ ಟ್ಯಾಕ್ಸಿಯ ಸರಣಿ  ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ದೇಶದ ವಿತರಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಇಸ್ರೇಲ್ ಸರಕಾರವು ಮಹತ್ವಾಕಾಂಕ್ಷೆಯ  ‘ಇಸ್ರೇಲ್ ರಾಷ್ಟ್ರೀಯ ಡ್ರೋನ್ ಉಪಕ್ರಮ(ಐಎನ್ಡಿಐ)ಕ್ಕೆ ಚಾಲನೆ ನೀಡಿದ್ದು ಇದು ಸಮಗ್ರ ರಾಷ್ಟ್ರೀಯ ಡ್ರೋನ್ ನೆಟ್ವರ್ಕ್ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಸರಕು ಮತ್ತು ಜನರ ಸಾಗಣೆಗೆ ಸಂಬಂಧಿಸಿ ಹೊಸ ತಂತ್ರಜ್ಞಾನಗಳ ವ್ಯಾಪಕ ಮತ್ತು ಬಹುಶಿಸ್ತೀಯ ಪರೀಕ್ಷೆ ನಡೆಸಿರುವುದು ವಿಶ್ವದಲ್ಲೇ ಈ ರೀತಿಯ ಪ್ರಥಮ ಉಪಕ್ರಮವಾಗಿದೆ.

ಸಂಚಾರ ದಟ್ಟಣೆಯನ್ನು ಎದುರಿಸಲು ಹೆಚ್ಚುವರಿ ಸಾಧನವಾಗಿ ಡ್ರೋನ್ಗಳ ವಾಣಿಜ್ಯ ಕಾರ್ಯಾಚರಣೆಗೆ ಸಂಬಂಧಿಸಿದ ನಿಯಂತ್ರಣ ಮತ್ತು ಶಾಸನ ಬದಲಾವಣೆಗಳನ್ನು ಒಳಗೊಂಡಂತೆ ಎಲ್ಲಾ ಅಂಶಗಳನ್ನೂ ಈ ಯೋಜನೆಯು ಪರಿಶೀಲಿಸುತ್ತಿದೆ ಎಂದು ಇಸ್ರೇಲ್ ನ  ಸಾರಿಗೆ ಸಚಿವ ಮಿರಿ ರೆಗೆವ್ ಹೇಳಿದ್ದಾರೆ.

Similar News