ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿ ಫೈನಲ್ ತಲುಪಿದ ಬೀಟ್ರಿಝ್

Update: 2023-06-07 18:20 GMT

ಪ್ಯಾರಿಸ್: ಮೊದಲ ಸೆಟ್ ಸೋಲಿನಿಂದ ಚೇತರಿಸಿ ಕೊಂಡ ಬೀಟ್ರಿಝ್ ಹಡಾಡ್ ಮೈಯಾ ಅವರು ಫ್ರೆಂಚ್ ಓಪನ್ ನಲ್ಲಿ ಸೆಮಿ ಫೈನಲ್ ತಲುಪಿದ ಮೊತ್ತ ಮೊದಲ ಬ್ರೆಝಿಲ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾತ್ರವಲ್ಲ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಅವರು ಮೊದಲ ಬಾರಿ ಅಂತಿಮ-4ರ ಘಟ್ಟ ತಲುಪಿದ್ದಾರೆ.

ಎರಡು ಗಂಟೆ, 29 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೀಟ್ರಿಝ್ ಟ್ಯುನಿಶಿಯ ಆಟಗಾರ್ತಿ ಉನ್ಸ್ ಜಾಬಿರ್ರನ್ನು 3-6, 7-6(5), 6-1 ಸೆಟ್ ಗಳ ಅಂತರದಿಂದ ಮಣಿಸಿದರು.

ಬೀಟ್ರಿಝ್ ಸೆಮಿಫೈನಲ್ ನಲ್ಲಿ 2 ಬಾರಿಯ ಚಾಂಪಿಯನ್ಇಗಾ ಸ್ವಿಯಾಟೆಕ್ ರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿ ಫೈನಲ್ ನಲ್ಲಿ ವಿಶ್ವದ ನಂ.2ನೇ ಆಟಗಾರ್ತಿ

ಅರ್ಯನಾ ಸಬಲೆಂಕಾ ಅವರು ಶ್ರೇಯಾಂಕರಹಿತ ಝೆಕ್ ಆಟಗಾರ್ತಿ ಕರೊಲಿನಾ ಮುಚೋವಾ ವಿರುದ್ಧ ಸೆಣಸಲಿದ್ದಾರೆ.

Similar News