×
Ad

ಹಾಕಿ ಪ್ರೊ ಲೀಗ್: ನೆದರ್‌ಲ್ಯಾಂಡ್ಸ್ ವಿರುದ್ಧ ಭಾರತಕ್ಕೆ ಸೋಲು

Update: 2023-06-08 23:27 IST

ಆ್ಯಮ್‌ಸ್ಟರ್‌ಡಮ್: ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಭಾರತ ತಂಡ ಆತಿಥೇಯ ನೆದರ್‌ಲ್ಯಾಂಡ್ಸ್ ವಿರುದ್ಧ 1-4 ಗೋಲುಗಳ ಅಂತರದಿಂದ ಶರಣಾಗಿದೆ.

ಪ್ರವಾಸಿ ಭಾರತ ತಂಡ ಐದು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರೂ ಕೂಡ ನಾಯಕ ಹರ್ಮನ್‌ಪ್ರೀತ್ ಸಿಂಗ್ (11ನೇ ನಿಮಿಷ)ಏಕೈಕ ಗೋಲು ಗಳಿಸಿದರು. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ಪರ ಪೆಪಿಜ್ ನ ರೆಯೆಂಗಾ(17ನೇ ನಿಮಿಷ), ಬೋರಿಸ್ ಬುರ್ಖಾರ್ಡ್ಟ್(40ನೇ ನಿಮಿಷ) ಹಾಗೂ ಡ್ಯುಕೊ ಟೆಲ್ಗೆಂಕಾಂಪ್(41ನೇ, 58ನೇ ನಿಮಿಷ)ಗೋಲು ಗಳಿಸಿ ಗೆಲುವಿಗೆ ನೆರವಾದರು. ಕಳೆದ ವಾರಾಂತ್ಯದಲ್ಲಿ ಲಂಡನ್‌ನಲ್ಲಿ ಸತತ ಗೆಲುವು ದಾಖಲಿಸಿದ್ದ ಭಾರತವು ಮೊದಲ ಕ್ವಾರ್ಟರ್‌ನಲ್ಲಿ 1-0 ಮುನ್ನಡೆ ಸಾಧಿಸಿತ್ತು. ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು. ಈ ಋತುವಿನಲ್ಲಿ 17 ಗೋಲು ಗಳಿಸಿ ಗಮನ ಸೆಳೆದರು.

ತವರು ಪ್ರೇಕ್ಷಕರ ಬೆಂಬಲದೊಂದಿಗೆ ತಿರುಗಿದ್ದ ಬಿದ್ದ ನೆದರ್‌ಲ್ಯಾಂಡ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಭಾರತವು ಗುರುವಾರ ಅರ್ಜೆಂಟೀನವನ್ನು ಎದುರಿಸಲಿದೆ.

Similar News