68 ಜನರನ್ನು ರಕ್ಷಿಸಿದ ರಶ್ಯದ ಯುದ್ಧನೌಕೆ
Update: 2023-06-19 23:00 IST
ಮಾಸ್ಕೋ: ಮೆಡಿಟರೇನಿಯನ್ ಸಮುದ್ರದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ನೌಕೆಯಿಂದ 68 ಜನರನ್ನು ರಶ್ಯದ ಯುದ್ಧನೌಕೆ ಹಾಗೂ ಸರಕು ಸಾಗಣೆ ನೌಕೆ ರಕ್ಷಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.
ವಿಹಾರ ನೌಕೆಯನ್ನು ಹೋಲುವ ‘ಅವಲಾನ್’ ನೌಕೆಯಿಂದ ಅಪಾಯದ ಸಂದೇಶವನ್ನು ಸ್ವೀಕರಿಸಿದ ಅಡ್ಮಿರಲ್ ಗೋರ್ಷ್ಕೋವ್ ಯುದ್ಧನೌಕೆಯು ಸರಕು ನೌಕೆಯ ನೆರವಿನಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಂಡು ನೌಕೆಯಲ್ಲಿದ್ದ 68 ಮಂದಿಯನ್ನು ರಕ್ಷಿಸಲಾಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿದ ಬಳಿಕ ಕಲಿಮ್ನೋಸ್ ದ್ವೀಪದ ಬಳಿಯಿದ್ದ ಗ್ರೀಸ್ನ ತಟರಕ್ಷಣಾ ಪಡೆಯ ದೋಣಿಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.