ನಾಪತ್ತೆಯಾಗಿರುವ ಸಬ್‌ಮೆರಿನ್ ಪತ್ತೆ ಕಾರ್ಯಾಚರಣೆ ಚುರುಕು
Update: 2023-06-20 23:39 IST
ವಾಶಿಂಗ್ಟನ್ : ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ಪ್ರವಾಸಿಗರು ತೆರಳಿದ್ದ ಸಬ್‌ಮೆರಿನ್ ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಬಳಿಯ ಸಾಗರದಲ್ಲಿ ನಾಪತ್ತೆಯಾಗಿದ್ದು ಇದರಲ್ಲಿ 5 ಮಂದಿ ಪ್ರವಾಸಿಗರಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಇದೀಗ ಸಬ್‌ಮೆರಿನ್ ಪತ್ತೆಕಾರ್ಯ ನಡೆಯುತ್ತಿದೆ.
ಆದರೆ ಸಬ್‌ಮೆರಿನ್‌ನಲ್ಲಿ 96 ಗಂಟೆಗಳಿಗೆ ಮಾತ್ರ ಸಾಕಾಗುವಷ್ಟು ಆಮ್ಲಜನಕ ದಾಸ್ತಾನಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. 6.5 ಮೀಟರ್ ಉದ್ದದ ಸಬ್‌ಮೆರಿನ್‌ನಲ್ಲಿ ಪಾಕಿಸ್ತಾನದ ಉದ್ಯಮಿ ಶಹಝಾದಾ ದಾವೂದ್, ಬ್ರಿಟನ್‌ನ ಉದ್ಯಮಿ ಹ್ಯಾಮಿಷ್ ಹಾರ್ಡಿಂಗ್, ಉದ್ಯಮಿ ಸ್ಟಾಕ್‌ಟನ್ ರುಷ್, ಸಬ್‌ಮೆರಿನ್‌ನ ಚಾಲಕ ಫ್ರಾನ್ಸ್‌ನ ಪೌಲ್ ಹೆನ್ರಿ ನರ್ಗಿಯೊಲೆಟ್ ಹಾಗೂ ಮತ್ತೊಬ್ಬ ಪ್ರಯಾಣಿಕರಿದ್ದರು ಎಂದು ವರದಿ ಹೇಳಿದೆ.