×
Ad

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್‌ ರಾಸಲೀಲೆ; ವೀಡಿಯೊ ವೈರಲ್

Update: 2026-01-19 16:10 IST

ಬೆಂಗಳೂರು : ಹಿರಿಯ ಪೊಲೀಸ್​​ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಮಹಿಳೆಯೋರ್ವರ ಜೊತೆ ಡಿಜಿಪಿ ಇರುವ ಖಾಸಗಿ ವೀಡಿಯೊ ಇದಾಗಿದ್ದು, ಈ ವೀಡಿಯೊ 1 ವರ್ಷದ ಹಿಂದೆ ಸೆರೆಯಾಗಿದ್ದು ಎನ್ನಲಾಗಿದೆ.

ಕಚೇರಿಯಲ್ಲಿ ಕುಳಿತು ಸಮವಸ್ತ್ರದಲ್ಲಿಯೇ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳು ವೈರಲ್​​ ಆದ ವಿಡಿಯೋದಲ್ಲಿವೆ. ಸದ್ಯ ಡಿಸಿಆರ್​ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಡಿಜಿಪಿ ರಾಮಚಂದ್ರ ರಾವ್‌ ಅವರ ಮಲ ಮಗಳು ನಟಿ ರನ್ಯಾ ರಾವ್‌ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದರೆ, ಈಗ ಆಕೆಯ ಮಲ ತಂದೆಯ ರಾಸಲೀಲೆಯ ವಿಡಿಯೋ ವೈರಲ್‌ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News