ಪರಮೇಶ್ವರ್ ವಿರುದ್ಧ ಈ.ಡಿ.ಗೆ ಮಾಹಿತಿ ನೀಡಿದ್ದೇ ಕಾಂಗ್ರೆಸ್ : ಪ್ರಹ್ಲಾದ್ ಜೋಶಿ
Update: 2025-05-24 01:00 IST
ಹುಬ್ಬಳ್ಳಿ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕ್ಕಾಗಿ ಕೋರಿ ಜಾರಿ ನಿರ್ದೇಶನಾಲಯ(ಈ.ಡಿ)ಕ್ಕೆ ಕಾಂಗ್ರೆಸ್‌ನ ಒಂದು ಗುಂಪು ಮಾಹಿತಿ ನೀಡಿದೆ. ಅದರಂತೆ ಈ.ಡಿ ತನ್ನ ಕರ್ತವ್ಯ ನಿಭಾಯಿಸುತ್ತಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ.ಡಿ.ಗೆ ಮಾಹಿತಿ ನೀಡಿದ ಕಾಂಗ್ರೆಸಿಗರು ಯಾರೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಗೊತ್ತಿದೆ. ಎಲ್ಲ ಗೊತ್ತಿದ್ದರೂ ಈಗ ನಾಟಕ ಮಾಡುತ್ತಿದ್ದಾರೆ. ಡಾ.ಪರಮೇಶ್ವರ್ ಒಬ್ಬ ಸಭ್ಯ ರಾಜಕಾರಣಿ. ಅವರ ಬಗ್ಗೆ ನಮಗೆ ಗೌರವವಿದೆ. ಅವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ತಮ್ಮ ಸರಕಾರಕ್ಕಿಲ್ಲ. ಆದರೆ, ಮಾಹಿತಿ ಸಿಕ್ಕ ಮೇಲೆ ಯಾರೇ ಆದರೂ, ಸರಿ ಈ.ಡಿ. ತನ್ನ ಕೆಲಸವನ್ನು ತಾನು ಮಾಡುತ್ತದೆ ಎಂದರು.