ಬಳ್ಳಾರಿ | ನಕಲಿ ವೈದ್ಯರ ಕ್ಲಿನಿಕ್ ಮುಟ್ಟುಗೋಲು
ಬಳ್ಳಾರಿ : ಜಿಲ್ಲೆಯ ವಿವಿಧೆಡೆ ವೈದ್ಯಕೀಯ ಪದವಿ ಪಡೆಯದೇ ವೈದ್ಯ ವೃತ್ತಿ ಮಾಡುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಮುಟ್ಟುಗೋಲು ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ನಗರದ ಮುಲ್ಲಂಗಿ ಸಂಜೀವಪ್ಪ ಬೀದಿಯ ಕೊಲ್ಮಿಚೌಕ್ ಸಮೀಪ ಫೈಲ್ಸ್ ವೈದ್ಯನೆಂದು ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಬಿಸ್ವಾಸ್ ಎಂಬ ವ್ಯಕ್ತಿ ನಡೆಸುತ್ತಿದ್ದ ಒಂದು ಕ್ಲಿನಿಕ್, ಕುಡುತಿನಿ ಗ್ರಾಮದಲ್ಲಿ ಕೇವಲ 10ನೇ ತರಗತಿ ಓದಿ ವೈದ್ಯ ಎಂದು ವಂಚಿಸುತ್ತಿದ್ದ ಆರೋಪದ ಮೇಲೆ ಎಮ್.ಡಿ ಗೌಸ್ ಎಂಬವರ ಕ್ಲಿನಿಕ್ ಮುಟ್ಟುಗೋಲು ಹಾಕಲಾಗಿದೆ.
ಬಳ್ಳಾರಿಯ ಸಿರಿವಾರ ಗ್ರಾಮದಲ್ಲಿ ಡಾ.ಪ್ರಕಾಶ್ ಎಂಬುವವರು, ಬಿ.ಎ.ಎಮ್.ಎಸ್ ವಿದ್ಯಾರ್ಹತೆ ಪಡೆದು ಚಿಕಿತ್ಸೆ ನೀಡುತ್ತಿದ್ದು, ಕೆ.ಪಿ.ಎಮ್.ಇ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪ ಮೇಲೆ ಇವರ ಎಮ್.ಜಿ. ಕ್ಲಿನಿಕ್ ಅನ್ನು ಕೂಡ ಮುಟ್ಟುಗೋಲು ಹಾಕಲಾಗಿದೆ.
ದಾಳಿಯ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಅಬ್ದುಲ್ಲಾ ಮತ್ತು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಹೆಚ್ ಗೋಪಾಲ್, ಆರ್.ಬಿ.ಎಸ್.ಕೆ ಸಮಾಲೋಚಕ ಮನೋಹರ್ ಹಾಗೂ ವೈದ್ಯರು ಇದ್ದರು.