×
Ad

ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ : ಬಸವರಾಜ ಬೊಮ್ಮಾಯಿ

"ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತು ಹಾಕುವವರೆಗೂ ಬಿಜೆಪಿ ಹೋರಾಟ ನಿಲ್ಲದು"

Update: 2026-01-17 16:48 IST

ಬಳ್ಳಾರಿ : ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತು ಹಾಕಲು ಬಿಜೆಪಿ ಹಳ್ಳಿ ಹಳ್ಳಿಗೆ ತೆರಳಿ ಹೋರಾಟ ನಡೆಸುತ್ತದೆ. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೊತೆಗೆ ಬಿಜೆಪಿ ಯಾವಾಗಲೂ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಳ್ಳಾರಿಯಲ್ಲಿ ಪೋಸ್ಟರ್ ಹಾಕುವ ವಿಚಾರದಲ್ಲಿ ನಡೆದ ಗಲಾಟೆ ವಿರೋಧಿಸಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಬಳ್ಳಾರಿಯಲ್ಲಿ ಈ ಘಟನೆ ಆಗಲು ಎರಡು ಕಾರಣ ಜನಾರ್ದನ ರೆಡ್ಡಿ ಕೋರ್ಟಿನ ಆದೇಶದ ಪ್ರಕಾರ ಬಳ್ಳಾರಿಗೆ ಬಂದಿದ್ದರಿಂದ ತಮಗೆ ಉಳಿಗಾಲವಿಲ್ಲ ಎಂದು, ಜನಾರ್ದರೆಡ್ಡಿ ಮತ್ತು ಅವರ ಆತ್ಮೀಯ ಸ್ನೇಹಿತ ರಾಮುಲು ಒಂದಾಗಿದ್ದಾರೆ ಎಂದರೆ ಬಳ್ಳಾರಿಯ ಕಾಂಗ್ರೆಸ್ ನಾಯಕರ ಕುರ್ಚಿ ಅಲುಗಾಡುತ್ತಿದೆ. ರಾಮುಲು ವೇಗ, ಜನಾರ್ದನ ರೆಡ್ಡಿ ಶಕ್ತಿ, ಬೆಂಕಿ ಬಿರುಗಾಳಿ ಇದ್ದ ಹಾಗೆ. ಜನಾರ್ದನ ರೆಡ್ಡಿ, ರಾಮುಲು ಶಕ್ತಿ ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಎಸ್ಟಿ ಮೀಸಲಾತಿ ಹೆಚ್ಚಳ :

ವಾಲ್ಮೀಕಿ ಜನಾಂಗ ಮೂವತ್ತು ವರ್ಷದಿಂದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡುತ್ತಾ ಬಂದಿತ್ತು. ಶೇ 3% ಮೀಸಲಾತಿಯನ್ನು 7% ಕ್ಕೆ ಹೆಚ್ಚಿಸುವಂತೆ ಕೇಳಿದರು. ನಾವು ಎಸ್ಟಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆ ಮಾಡಿದೆವು, ವಾಲ್ಮೀಕಿ ಸಮುದಾಯದ ಸ್ವಾಮಿಜಿ, ರಾಮುಲು ಪ್ರತಿಭಟನೆ ಮಾಡಿದರೆ ಕಾಂಗ್ರೆಸ್ ನವರು ಒಬ್ಬರೂ ಬರಲಿಲ್ಲ. ನಾನು ಸಿಎಂ ಆಗಿದ್ದಾಗ ಮಿಸಲಾತಿಯನ್ನಿ 3% ರಿಂದ 7% ಕ್ಕೆ ಹೆಚ್ಚಿಸಿದೆವು. ಇದರಿಂದ ಸಾವಿರಾರು ಮಕ್ಕಳಿಗೆ ಮೆಡಿಕಲ್, ಇಂಜಿನೀಯರಿಂಗ್ ಸಿಟು ಉದ್ಯೋಗ ಸಿಗುತ್ತಿದೆ. ಯಡಿಯೂರಪ್ಪ ಅವರ ನಾಯಕತ್ವದಿಂದ ಅದು ಸಾಧ್ಯವಾಗಿದೆ ಎಂದು ಹೇಳಿದರು.

ಮೃತ ರಾಜಶೇಖರ ಸಾವಿಗೆ ನ್ಯಾಯ ಕೊಡಿಸಲು ಬಿಜೆಪಿ ಹೋರಾಟ ಮಾಡುತ್ತದೆ. ಅಲ್ಲಿವರೆಗೂ ಬಿಜೆಪಿ ವಿಶ್ರಮಿಸುವುದಿಲ್ಲ. ಕಾಂಗ್ರೆಸ್ ಸರಕಾರ ತೆಗೆಯುವವರೆಗೂ ನಾವು ಹಳ್ಳಿಹಳ್ಳಿಗೆ ಹೋಗಿ ಭ್ರಷ್ಟ ಸರಕಾರವನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ. ಬಳ್ಳಾರಿ ಅಭಿವೃದ್ಧಿ ಮಾಡಲು ಜನಾರ್ದನ ರೆಡ್ಡಿ, ರಾಮುಲು ಅವರ ಹಿಂದೆ ನಾವಿದ್ದೇವೆ ಎಂದು ಸಾರಲು ನಾವು ಬಂದಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿರುವುದಕ್ಕೆ ಕೋಟಿ ಕೋಟಿ ಧನ್ಯವಾದಗಳು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News