ಕಂಪ್ಲಿ| ಖಾಸಗಿ ಭೂಮಿ ಅಕ್ರಮ ಒತ್ತುವರಿ ಮಾಡಲು ಹುನ್ನಾರ : ಚನ್ನಪ್ಪ ಆರೋಪ
ಕಂಪ್ಲಿ: ಖಾಸಗಿ ಭೂಮಿಯನ್ನುಅಕ್ರಮ ಒತ್ತುವರಿ ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಕಂಪ್ಲಿ ಕ್ಷೇತ್ರಾಧ್ಯಕ್ಷ ಸಿ.ಎ.ಚನ್ನಪ್ಪ ಆರೋಪಿಸಿದರು.
ಶನಿವಾರ ಪಟ್ಟಣದ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಎ.ಚನ್ನಪ್ಪ, ಪಟ್ಟಣದ 4/6ನೇ ವಾರ್ಡಿನ ಸರ್ವೆ ನಂ.1400ರಲ್ಲಿ 5 ಎಕರೆ 34 ಸೆಂಟ್ಸ್ ಜಾಗ ಇದ್ದು, ಇದರಲ್ಲಿ 50ಸೆಂಟ್ಸ್ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಹೊರಟಿದ್ದಾರೆ. ಈಗಾಗಲೇ ಕೆಲವರು ಸರಕಾರಿ ಉದ್ಯಾನವನ ಎಂದು ಪುರಸಭೆಗೆ ಮನವಿ ಮಾಡಿದ್ದಾರೆ. ವಲಿಸಾಬ್ ಅವರ ಆಸ್ತಿಯನ್ನು ಸರಕಾರಿ ಜಾಗವೆಂದು ಸುಳ್ಳು ಹೇಳಿ ವಶಪಡಿಸಿಕೊಳ್ಳಲು ಹೊರಟಿದ್ದಾರೆ. 50 ಸೆಂಟ್ಸ್ ಜಾಗವನ್ನು ಕಾನೂನಾತ್ಮಕವಾಗಿ ತೆರವುಗೊಳಿಸಲಾಗಿದೆ. 104 ನಿವೇಶಗಳನ್ನು ಮಾರಾಟ ಮಾಡಿದ್ದು, ಇನ್ನೂ 50 ಸೆಂಟ್ಸ್ ಜಾಗ ಉಳಿದಿದೆ. ಆದ್ದರಿಂದ ಈ ಜಾಗವನ್ನು ಬೇರೆಯವರಿಗೆ ಒತ್ತುವರಿ ಮಾಡುವುದಕ್ಕೆ ಬಿಡುವುದಿಲ್ಲ. ಪುರಸಭೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಫಾರಂ ನಂ-3ರಲ್ಲಿ ನೀಡಿದ್ದು, ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ವಾದ(ಪ್ರೋ.ಬಿ.ಕೃಷ್ಣಪ್ಪ) ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬಸಪ್ಪ ಭಾವಿಕಟ್ಟಿ, ಭೀಮವಾದ ಸಂಘಟನೆಯ ಪೃಥ್ವಿರಾಜ್‌ಸಿಂಗ್, ಯುವ ಮುಖಂಡರಾದ ಐ.ಶಂಕರ್, ಹುಸೇನಪ್ಪ ಉಪಸ್ಥಿತರಿದ್ದರು.