ಗಣರಾಜ್ಯೋತ್ಸವದ ದಿನ ವಾಹನಗಳಿಗೆ ರಾಷ್ಟ್ರಧ್ವಜ ಅಳವಡಿಕೆಗೆ ನಿರ್ಬಂಧವಿಲ್ಲ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸ್ಪಷ್ಟನೆ
Update: 2026-01-14 18:49 IST
ಬಳ್ಳಾರಿ,ಜ.14: ಗಣರಾಜ್ಯೋತ್ಸವದ ಅಂಗವಾಗಿ ವಾಹನಗಳಿಗೂ ಕೂಡ ಧ್ವಜಸಂಹಿತೆ ಪಾಲಿಸಿಕೊಂಡು, ರಾಷ್ಟ್ರಧ್ವಜವನ್ನು ಅಳವಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸ್ಪಷ್ಟನೆ ನೀಡಿದ್ದಾರೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಾಹನಗಳಿಗೆ ರಾಷ್ಟ್ರಧ್ವಜ ಅಳವಡಿಕೆಗೆ ನಿರ್ಬಂಧಿಸಲಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದು, ವಾಹನಗಳಿಗೆ ರಾಷ್ಟ್ರಧ್ವಜ ಅಳವಡಿಕೆ ವಿಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿಯಲ್ಲಿ ಯಾರೂ ಕೂಡ ರಾಷ್ಟ್ರಧ್ವಜ ಬಳಸಬಾರದು. ಧ್ವಜ ಸಂಹಿತೆ ಪಾಲಿಸಿಕೊಂಡು ಸಾರ್ವಜನಿಕರು ಗಣರಾಜ್ಯೋತ್ಸವವನ್ನು ಆಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸ್ಪಷಪಡಿಸಿದ್ದಾರೆ.