×
Ad

ಬೀದರ್‌ | ಫೆಲೆಸ್ತೀನ್‌ನಲ್ಲಿ ನಾಗರಿಕರ ಹತ್ಯೆ ಖಂಡಿಸಿ ಪ್ರತಿಭಟನೆ

Update: 2025-08-08 21:02 IST

ಬೀದರ್ : ಫೆಲೆಸ್ತೀನ್‌ ವಿಷಯ ಕೇವಲ ರಾಜಕೀಯವಾದುದಲ್ಲ, ಅದು ಮಾನವೀಯ ವಿಷಯವಾಗಿದೆ ಎಂದು ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್‌ನ ಮುಹಮ್ಮದ್ ಆಸಿಫುದ್ದೀನ್ ಸಾಬ್ ತಿಳಿಸಿದರು.

ನಗರದ ಜಾಮಾ ಮಸೀದಿಯಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೆಷನ್ (ಎಸ್ಐಒ) ಸಂಘಟನೆ ವತಿಯಿಂದ ಫೆಲೆಸ್ತೀನ್‌ನಲ್ಲಿ ನಾಗರಿಕರ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಈ ಶಾಂತಿಯುತ ಪ್ರತಿಭಟನೆ ಕೇವಲ ಸಾಂಕೇತಿಕವಲ್ಲ. ಇದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಫೆಲೆಸ್ತೀನ್‌ ವಿಷಯ ಕೇವಲ ರಾಜಕೀಯ ವಿಚಾರವಲ್ಲ, ಅದು ಮಾನವೀಯ ವಿಷಯವಾಗಿದೆ. ನಾವು ಬಡವರ ಪರವಾಗಿ ಧ್ವನಿ ಎತ್ತುತ್ತೇವೆ. ನಾವು ಫೆಲೆಸ್ತೀನ್‌ ಜನರ ಜೊತೆ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ ಎಂದು ಹೇಳಿದರು.

ಎಸ್ಐಒ ಬೀದರ್ ಘಟಕದ ಅಧ್ಯಕ್ಷ ಮುಹಮ್ಮದ್ ಎಹ್ತೇಶಾಮುದ್ದೀನ್ ಮಾತನಾಡಿ, ಈ ಪ್ರತಿಭಟನೆಯ ಉದ್ದೇಶ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ಮಾನವೀಯ ಸಂಕಷ್ಟಗಳ ಕುರಿತು ಜನಜಾಗೃತಿ ಮೂಡಿಸುವುದಾಗಿದೆ. ನಾವು ಫೆಲೆಸ್ತೀನ್‌ನ ಅಮಾಯಕರ ಜೊತೆಗಿದ್ದೇವೆ. ಫೆಲೆಸ್ತೀನ್‌ ಜನತೆಗೆ ನ್ಯಾಯ ಮತ್ತು ಶಾಂತಿ ಸಿಗಲಿ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಎಸ್ಐಒ ಸಂಘಟನೆಯ ಸದಸ್ಯ ಎಂ.ಡಿ ಸೈಫುದ್ದಿನ್, ಘಟಕ ಕಾರ್ಯದರ್ಶಿ ಎಂ.ಎ ಮುಕ್ತಾದಿರ್, ಮಾಧ್ಯಮ ಕಾರ್ಯದರ್ಶಿ ಸೈಯದ್ ಮಸೂದ್, ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News